ಸಿಂಧಗಿ

ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆ ಆದೇಶ; ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆ ಆದೇಶ; ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
Higher order from the municipality to the municipal council; Congress workers celebrate victory at B

ಸಿಂದಗಿ 6: ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಲ್ಲಿ ಒಂದಾದ ಪುರಸಭೆಯಿಂದ ನಗರ ಸಭೆಯನ್ನಾಗಿ ಮಾಡಲು ಪಣತೊಟ್ಟ ಶಾಸಕ ಅಶೋಕ ಮನಗೂಳಿ ಅವರ ಶ್ರಮದಂತೆ ನುಡಿದಂತೆ ನಡೆದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಪೌರಾಡಳಿತ ಸಚಿವ ಬೈರತಿ ಸುರೇಶ ಅವರು ಪುರಸಭೆಯಿಂದ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಸಿಂದಗಿಯ ಜನತೆ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅಭಿಮತ ವ್ಯಕ್ತಪಡಿಸಿದರು. 

ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಯ ಆದೇಶ ಹೊರಬಿದ್ದ ಹಿನ್ನಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಮಾತನಾಡಿ, ಕಳೇದ 2018ರಲ್ಲಿ ದಿ.ಎಂ.ಸಿ.ಮನಗೂಳಿ ಅವರು ಸಮ್ಮಿಶ್ರ ಸರಕಾರದಲ್ಲಿ ಪ್ರಸ್ತಾವನೆ ಸಲ್ಲಿಸಿದರು. ಅದು ಅಪೂರ್ಣವಾಗಿತ್ತು ಅದನ್ನು ಶಾಸಕ ಅಶೋಕ ಮನಗೂಳಿ ಅವರು ಪೂರ್ಣಗೊಳಿಸಿದ್ದಾರೆ ಇದರಿಂದ ನಗರ ಅಭಿವೃದ್ಧಿಗೆ ಮೊದಲ ಹೆಜ್ಜೆಯಿಟ್ಟಂತಾಗಿದೆ. ಜನತೆಯ ಆಶಯವನ್ನು ಈಡೇರಿಸಿದ್ದಾರೆ ಮೂಂಬರುವ ದಿನಗಳಲ್ಲಿ ನಾವು ನಿವೆಲ್ಲ ಅವರಿಗೆ ಸಹಕಾರ ನೀಡೋಣ ಎಂದರು. 

ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತದೆ ಎನ್ನುವುದಕ್ಕೆ ಈ ಆದೇಶವೇ ಸಾಕ್ಷಿ. ಹಿಂದೆ ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಕನಸ್ಸು ನನಸು ಮಾಡುವ ದಿಸೆಯಲ್ಲಿ ಶಾಸಕ ಅಶೋಕ ಮನಗೂಳಿಯವರ ಅವಿರತ ಶ್ರಮದಿಂದ ಈ ಕ್ಷೇತ್ರಕ್ಕೆ ಯೋಜನೆಗಳ ಮಹಾಪುರವೇ ಹರಿದು ಬರುತ್ತಿದೆ ಪುರಸಭೆಯಿಂದ ನಗರ ಸಭೆಯನ್ನಾಗಿ ಆದೇಶವಾಗಿದ್ದು 56 ಸಾವಿರ ಜನರ ಆಶಯ ಈಡೇರಿಸಿದಂತಾಗಿದೆ. ಅಭಿವೃದ್ಧಿಗೆ ಮತಕ್ಷೇತ್ರದ ಜನತೆಯ ಸಹಕಾರ ಅತ್ಯಗತ್ಯ ಎಂದು ಆಶಯ ವ್ಯಕ್ತಪಡಿಸಿದರು. 

ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ ಮಾತನಾಡಿ, ರಾಜ್ತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದೆ ಅದರಲ್ಲಿ ಸಿಂದಗಿ ನಗರಕ್ಕೆ ಕೊಡುಗೆ ಮೇಲೆ ಕೊಡುಗೆಗಳನ್ನು ನೀಡುತ್ತಿರುವ ಸಚಿವ ಸಂಪುಟದ ಎಲ್ಲ ಸಚಿವರಿಗೆ ಹಾಗೂ ಅದಕ್ಕೆ ಪೂರಕವಾಗಿ ಕಾರ್ಯಪವೃತ್ತರಾದ ಶಾಸಕ ಅಶೋಕ ಮನಗೂಳಿ ಅವರಿಗೆ ಅಭಿನಂದನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್‌.ರಾಜಶೇಖರ, ದಯಾನಂದ ಇವಣಿ, ಸಿದ್ದು ಅಂಗಡಿ, ಅಬ್ಬಾಸಲಿ ಕಾಕಂಡಕಿ, ವಿಜಯ ಹಾಗೂ ಸಿಬ್ಬಂದಿ, ಸದಸ್ಯರಾದ ಗೋಲ್ಲಾಳ ಬಂಕಲಗಿ, ರಜತ ತಾಂಬೆ, ಶ್ರೀಶೈಲ ಬಿರಗೊಂಡ, ಭೀಮು ಕಲಾಲ, ಶರಣಪ್ಪ ಸುಲ್ಪಿ, ತಿರುಪತಿ ಬಂಡಿವಡ್ಡರ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ