ರಾಣೆಬೆನ್ನೂರ

ಹೈಟೇಕ್ ಸ್ಪರ್ಶ ಪಡೆದು ಹಾಡು ಹಗಲೇ ನಡೆಯುತ್ತಿರುವ ಮಟ್ಕಾ ದಂದೆ

ಹೈಟೇಕ್ ಸ್ಪರ್ಶ ಪಡೆದು ಹಾಡು ಹಗಲೇ ನಡೆಯುತ್ತಿರುವ ಮಟ್ಕಾ ದಂದೆ

ರಾಣೇಬೆನ್ನೂರು 29: ಓಸಿ ಆಟ ಸಂಪೂರ್ಣ ನಿಷೇಧವಾಗಿದೆ ನಗರದಲ್ಲಿ ಎಲ್ಲಿಯೂ ಓಸಿ (ಮಟ್ಕಾ) ಆಟ ನಡೆಯುವುದಿಲ್ಲ ಓಸಿ ಬರೆಯುವವರು ಇಗಿಲ್ಲ ಎಂದು ಘಂಟಾಘೋಷವಾಗಿ ಪೋಲೀಸ್ ಆಡಳಿತದ ಸ್ಪಷ್ಟ ಘೋಷಣೆ ಮದ್ಯಯು ನಗರದಲ್ಲಿ ಮಟ್ಕಾ ಹಾವಳಿ ಹೆಚ್ಚಾಗುತ್ತಿದೆ. ಮಟ್ಕಾ ಹಾವಳಿಯಿಂದ ಬಡ ಕುಟುಂಬಗಳು ಬೀದಿಗೆ ಬಿಳುವಂತಾಗಿದೆ. ಎಂದು ಸಾರ್ವಜನಿಕರು ಬಹಿರಂಗವಾಗಿ ಹೇಳುತ್ತಿದ್ದಾರೆ.  ನಗರದ ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ದಂದೆ ಜೊರಾಗಿ ನಡೆಯುತ್ತಿದ್ದು, ವಿದ್ಯೆ ಕಲಿಯುವ ವಿಧ್ಯಾರ್ಥಿಗಳಿಂದ ಹಿಡಿದು ಹಿರಿಯರು, ಬೀದಿ ಬದಿ ವ್ಯಾಪಾರಸ್ತರು ಮಟ್ಕಾ ವ್ಯಾಮೋಹಕ್ಕೆ ಒಳಗಾಗಿ ದಿನನಿತ್ಯವು ಸಾವಿರಾರು ರೂಪಾಯಿಗಳನ್ನು ಕಳೆದುಕೂಳ್ಳುತ್ತಿದ್ದಾರೆ.  

ಇಂತಹ ಅಕ್ರಮ ಮಟ್ಕಾ ವ್ಯವಹಾರವು ಕೇವಲ ನಗರಕ್ಕಷ್ಟೇ ಸಿಮಿತವಾಗದೇ ಗ್ರಾಮಾಂತರ ಪ್ರದೇಶಗಳಿಗೂ ಕಾಲಿಟ್ಟಿದ್ದು ಈ ದಂದೆ ಅಲ್ಲಿಯು ಸಹ ಎಗ್ಗಿಲ್ಲದೆ ನಡೆಯುತ್ತಿದ್ದೆ ಎಂಬ ಆರೋಪವು ವ್ಯಾಪಕವಾಗಿ ಕೇಳಿ ಬರುತ್ತಿದೆ. ನಗರದಲ್ಲಿ ಈ ಹಿಂದೆ ಚಿಟಿಗಳ ಮೂಲಕ  ನಡೆಯುತ್ತಿದ್ದ ಮಟ್ಕಾ ದಂದೆ ಪ್ರಸ್ತುತ ದಿವಸಗಳಲ್ಲಿ ಇದು ಸಹ ಹೈಟೇಕ್ ಸ್ಪರ್ಶ ಪಡೆಯುತ್ತಿದೆ. ಮೊಬೈಲ್, ವ್ಯಾಟ್ಸಪ್‌ಗಳ ಮೂಲಕ ಲಕ್ಷಾಂತರ ರೂ ಕಟ್ಟುವ ಮೂಲಕ ಅಂಕಿಗಳನ್ನು ಬರೆಸಲಾಗುತ್ತಿದೆ. ಅಲ್ಲದೇ ಕೆಲವು ಪ್ರಭಾವಿಗಳ ನೇತ್ರತ್ವದಲ್ಲಿಯೇ ಈ ದಂದೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹೇಳುವವರು ಇಲ್ಲ, ಕೇಳುವವರು ಇಲ್ಲದಂತಾಗಿದೆ. ಆಯಾ ಕಟ್ಟಿನ ಸ್ಥಳಗಳಲ್ಲಿ ಮಟ್ಕಾ ಬುಕಿಂಗ್ ಸದ್ದಿಲ್ಲದೆ ನಡೆಯುತ್ತಲಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.  

ಆನನೀಬೀಡ ಪ್ರಮುಖ ಪ್ರದೇಶಗಳಲ್ಲಿ ಈ ದಂದೆ ಹೆಚ್ಚಾಗಿ ನಡೆಯುತ್ತಿದೆ. ಪಾನ್‌-ಬೀಡಾ, ಕೋಲ್ಡ್‌ಡ್ರಿಂಕ್ಸ್‌ ಅಂಗಡಿಗಳ ಹೆಸರಿನ ಅಂಗಡಿಗಳಲ್ಲಿ ಹಗಲಲ್ಲೇ ರಾಜಾ ರೋಶವಾಗಿ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ತಾಲೂಕಿನ ಚಳಗೇರಿ, ಕರೋರು, ಮೆಡ್ಲೇರಿ, ಆರೇಮಲ್ಲಾಪುರ, ಸೇರಿದಂತೆ ತಾಲೂಕಿನ ಮತ್ತಿತರ ಗ್ರಾಮಾಂತರ ಪ್ರದೇಶಗಳಲ್ಲಿ ಈ ದಂದೆ ವಿಸ್ತರಿಸಿಕೂಂಡು ದಿನನಿತ್ಯವು ಲಕ್ಷಾಂತರ ವ್ಯವಹಾರ ನಡೆಯುತ್ತದೆ. ಈ ದಂದೆಯಿಂದ ಅನೇಕ ಬಡ ಕುಟುಂಬಗಳು ಬೀದಿ ಪಾಲಾದರೆ ಕೆಲವು ಯುವಕರು ಹಣ ಕಳೆದುಕೂಂಡು ಊರು ಬಿಟ್ಟು ಪಲಾಯನ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.  

ಮಟ್ಕಾ ಜೋಜಾಟದ ಹಿಂದೆ ಬಿದ್ದು ಇದು ವರೆಗೂ ಯಾರೂ ಶ್ರೀಮಂತರಾದ ಉದಾಹರಣೆಗಳಿಲ್ಲ. ಅದನ್ನು ನಡೆಸುವ ಬುಕ್ಕಿಗಳು ಮಾತ್ರ ಶ್ರೀಮಂತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಟ್ಕಾ ಜೋಜಾಟದಲ್ಲಿ ತೊಡಗುವ ಯುವಕರು ಆಲೋಚಿಸಬೇಕಾಗಿದೆ ಮತ್ತು ಈ ವ್ಯವಸ್ಥೆಗೆ ಪೋಲೀಸರು ಕಡಿವಾಣ ಹಾಕಲು ಮುಂದಾಗಬೇಕಾಗಿದೆ ಎನ್ನುವ ಬಲವಾದ ಕೂಗು ಪ್ರಜ್ಞಾವಂತ ನಾಗರೀಕರಿಂದ ಕೇಳಿ ಬಂದಿದೆ.  

ಮೊಬೈಲ್ ಬಳಿಕೆ : ಮಟ್ಕಾ ದಂದೆ ಯುವಕರನ್ನು ಸೆಳೆಯುತ್ತಿದೆ.  ಯುವಕರು ಮೊಬೈಲ್ ಮೂಲಕ ಮಟ್ಕಾ ಆಡುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಅಂತರ್ಜಾಲದ ಮೂಲಕ ಸಂಖ್ಯೆಗಳು ಪ್ರದರ್ಶನಗೂಳ್ಳುತ್ತವೆ. ಅದೆಷ್ಟೂ ಯುವಕರು ಇದರ ದಾಸರಾಗುತ್ತಿದ್ದಾರೆ. ಮೊದಲೆಲ್ಲ ಚಿಟಿ ಬರೆದು ಕೂಡುತ್ತಿದ್ದ ಮಟ್ಕಾ ಬುಕ್ಕಿಗಳು ಸಹ ಇಂದು ಹೈಟೇಕ್ ಆಗಿದ್ದಾರೆ. ಮೊದಲು ಚೀಟಿ ಬರೆದು ಕೂಡುವಾಗ ಪೋಲೀಸರ ಕೈಗೆ ಸುಲಭವಾಗಿ ತಗಲಿ ಹಾಕಿಕೂಳ್ಳುವ  ಸಂಭವವಿತ್ತು ಆದರೇ ಈಗ ಮೊಬೈಲ್‌ನಲ್ಲಿ ನಂಬರ್‌ಗಳನ್ನು ಪಡೆದು ಪಟ್ಟಿ ತೆಗೆದುಕೂಳ್ಳಲಾಗುತ್ತಿದೆ ಎನ್ನಲಾಗಿದೆ. 


ಸುದ್ದಿ ಓದಿ