ರಾಣೆಬೆನ್ನೂರ

ರಾಜ್ಯ ಹೆದ್ದಾರಿಯಲ್ಲಿ ಎತ್ತರದ ಗುಂಡಿಗಳು : ಹೆದ್ದಾರಿ ತಡೆ, ವಿನೂತನ ಪ್ರತಿಭಟನೆ

ರಾಜ್ಯ ಹೆದ್ದಾರಿಯಲ್ಲಿ ಎತ್ತರದ ಗುಂಡಿಗಳು : ಹೆದ್ದಾರಿ ತಡೆ, ವಿನೂತನ ಪ್ರತಿಭಟನೆ

ರಾಣೆಬೆನ್ನೂರು ನ 3 ತಾಲೂಕಿನ ಹರಿಹರ ಸಮಸ್ಸಗಿ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಆಳೆತ್ತರದ ಗುಂಡಿಗಳು ತಕ್ಷಣವೇ ಮುಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ರೈತ ಸಂಘದ ಮುಖಂಡರು ಹೆದ್ದಾರಿ ತಡೆ ನಡೆಸಿ, ಗುಂಡಿಗಳಲ್ಲಿ ಮಲಗಿ ವಿನೂತನ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರ ಗೌಡ ಪಾಟೀಲ್ ಅವರು, ಹೆದ್ದಾರಿಯಲ್ಲಿ ಆ ಳೆತ್ತರದ ಗುಂಡೆಗಳು ಬಿದ್ದು ಎರಡು ತಿಂಗಳುಗಳು ಗತಿಸಿವೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಸೇರಿದಂತೆ ಮತ್ತಿತರ ವಾಹನಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ, ನೆಲಕಪ್ಪಳಿಸಿ, ಅಪಘಾತಕ್ಕಿಡಾಗಿ, ಕೈ ಕಾಲು ಮುರಿದುಕೊಂಡಿದ್ದಾರೆ, ಆಸ್ಪತ್ರೆಗೆ ಸೇರುತ್ತಿದ್ದಾರೆ, ಲೋಕೋಪಯೋಗಿ ಇಲಾಖೆ ತಮಗೇನು ಸಂಬಂಧವಿಲ್ಲದಂತೆ, ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಲಾಖೆ ಇದು ರಾಜ್ಯ ಹೆದ್ದಾರಿಯನ್ನುವುದನ್ನೇ ಮರೆತಿದ್ದಾರೆ. ಕೂಡಲೇ ಗುಂಡಿಗಳನ್ನು ಮುಚ್ಚಬೇಕು. ಇಲ್ಲದೆ ಹೋದರೆ  ಮುಂದಿನ ದಿನಮಾನಗಳಲ್ಲಿ, ರಾಜ್ಯ ಹೆದ್ದಾರಿ ತಡೆದು, ಬಂಧುಗೂಳಿಸಿ, ಅಲ್ಲದೆ ಪಕ್ಕದ ರಾಷ್ಟ್ರೀಯ ಹೆದ್ದಾರಿನ್ನು ಸಹ, ಬಂದ್ ಮಾಡುವುದು ಅನಿವಾರ್ಯವಾಗುತ್ತದೆ  ಎಂದು ಪಾಟೀಲ್ ಎಚ್ಚರಿಸಿದ್ದಾರೆ. ಹರಿಹರ ಸಮಸ್ಸಗಿ ರಸ್ತೆ, ಇಟಗಿ ಮಾರ್ಗವಾಗಿ ಹಲಗೇರಿಯ ಮೂಲಕ, ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿವೆ  ಆದರೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಇಲಾಖೆಯ ಅಧಿಕಾರಿಗಳು ಗಮನಹರಿಸದೆ ಇರುವುದು ನಾಗರಿಕರನ್ನು ಆಕ್ರೋಶಕ್ಕಿಡು ಮಾಡಿದೆ , ಹೀಗಾಗಿ ದೇಶದ ರೈತ ಸಮುದಾಯ ಎಂದು ನೂತನವಾಗಿ ಬಿದ್ದಿರುವ  ಗುಂಡಿಗಳಲ್ಲಿ, ಮಲಗಿ  ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದು ಮಾಧ್ಯಮಕ್ಕೆ ರವೀಂದ್ರ ಗೌಡ  ಪಾಟೀಲ್, ಅವರು ಸ್ಪಷ್ಟಪಡಿಸಿದರು ಪ್ರತಿಭಟನೆ ಮುಂಚೂಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಿಗೇರಿ, ಹರಿಹರ ಗೌಡ ಪಾಟೀಲ್, ಭೀಮಣ್ಣ ಪೂಜಾರ್, ಕುಮಾರ್ ಹಲಗೇರಿ, ಶಿವಣ್ಣ ಬಾಕರ್ಿ, ಪ್ರಕಾಶ ಹರಿಯಾಳದ, ಬಸವರಾಜ ಕಡೂರ, ಪ್ರಶಾಂತ ರೆಡ್ಡಿ ಯರೇರೆಡ್ಡಿ, ಮಹಮ್ಮದ್ ಅಲಿ ಸಾಬ್ ದೊಡ್ಮನಿ, ಎಲ್ಲಪ್ಪ ಓಲೆಕಾರ್, ಜಮಾಲಸಾಬ್ ದೊಡ್ಡಮನಿ, ಮಲ್ಲಪ್ಪ ಕಿವುಡೇರ, ಚಂದ್ರಪ್ಪ ಹೊಸಳ್ಳಿ, ಧರ್ಮಣ್ಣ ಅಂತರವಳ್ಳಿ, ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. ಎರಡು ತಾಸುಗಳ ಕಾಲ ರಸ್ತೆ ತಡೆಯಿಂದಾಗಿ ನೂರಾರು ವಾಹನಗಳು, ಸಂಚರಿಸದೆ ನಿಂತಲ್ಲೇ ನಿಂತಿದ್ದರಿಂದ, ದೂರದ ಪ್ರಯಾಣಿಕರಿಗೆ ಅನೇಕ ರೀತಿಯಲ್ಲಿ ತೊಂದರೆಯನ್ನು ಅನುಭವಿಸುವಂತಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹಲಗೇರಿ ಪಿಎಸ್ಐ ಬಸನಗೌಡ ಬಿರಾದಾರ್ ಮತ್ತು ಸಿಬ್ಬಂದಿ ಭಾರಿ ಬಂದೋಬಸ್ತ್ ನೀಡಿದ್ದರು. 

 

ಸುದ್ದಿ ಓದಿ