ಹೆಸ್ಕಾಂ ಶಾಖಾಧಿಕಾರಿ ಪ್ರತಿನಿಧಿ ಲೋಕಾಯುಕ್ತರ ಬಲೆಗೆ
ಜಮಖಂಡಿ: 22: ತಾಲ್ಲೂಕಿನ ತುಂಗಳ ಗ್ರಾಮದ ತಂಗೆವ್ವ ಹಣಮಂತ ಅವರ ಜಮೀನಿನಲ್ಲಿ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ ಮತ್ತು ಟಿ.ಸಿ, ಅಳವಡಿಸಿಕೊಡಲು ಹಣದ ಬೇಡಿಕೆ ಇಟ್ಟಿದ್ದ ಹೆಸ್ಕಾಂ ಶಾಖಾಧಿಕಾರಿ ಹಾಗೂ ಪ್ರತಿನಿಧಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಾವಳಗಿ ಕಾರ್ಯ ಮತ್ತು ಪಾಲನೆಯ ಶಾಖಾಧಿಕಾರಿ ಮಲ್ಲಿಕಾರ್ಜುನ ಶಿವಾನಂದ ಡೊಮನಾಳ, ಗ್ರಾಮೀಣ ವಿದ್ಯುತ್ ಪ್ರತಿನಿಧಿ ಶಿವಲಿಂಗಪ್ಪ ಬಸಲಿಂಗಪ್ಪ ಕನಾಳ ಅಧಿಕಾರಿಗಳು ಟಿಸಿ ಅಳವಡಿಸಲು 20,ಸಾವಿರ ರೂ,ಗಳ ಲಂಚ ಕೇಳಿದ್ದರು. ಮೊದಲ ಕಂತಿನ ರೂ,10 ಸಾವಿರ ಹಣ ನೀಡುವಾಗ ವಿಜಯಪುರ ಲೋಕಾಯುಕ್ತ ಎಸ್ ಪಿ ಅನಿತಾ ಹದ್ದಣ್ಣವರ, ಡಿವೈಎಸ್ ಪಿ ಪುಷ್ಪಲತಾ ಎನ್ ನೇತೃತ್ವದ ತಂಡ ದಾಳಿ ಮಾಡಿ. ಇಬ್ಬರು ಅಧಿಕಾರಿಗಳನ್ನು ಬಂಧಿಸಿದೆ.