ರಾಷ್ಟ್ರೀಯ

ಆಂಧ್ರಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಆಂಧ್ರಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಹೈದರಾಬಾದ್,ಡಿಸೆಂಬರ್ 1: ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ಇದೇ   3 ಮತ್ತು 4 ರಂದು ಮತ್ತು ಹಾಗೂ  3 ರಂದು ರಾಯಲಸೀಮಾ ದಲ್ಲಿ ಗುಡುಗು- ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಕೇಂದ್ರ ಮಂಗಳವಾರ ತಿಳಿಸಿದೆ.

ಡಿಸೆಂಬರ್ 4 ಮತ್ತು 5 ರಂದು ರಾಯಲಸೀಮಾದಲ್ಲಿ ಮತ್ತು ದಕ್ಷಿಣ ಕರಾವಳಿಯ  ಆಂಧ್ರಪ್ರದೇಶದಲ್ಲಿ ಡಿಸೆಂಬರ್ 5 ರಂದು ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಇಲಾಖೆ ವರದಿ ಹೇಳಿದೆ. ಇದೇ   3 ರಂದು ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣಾ ಮಳೆಯಾಗಲಿದೆ.

ಮುಂದಿನ ಐದು ದಿನಗಳಲ್ಲಿ  ಅಥವಾ ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ  ಹಲವೆಡೆ  ಸಾಧಾರಣಾದಿಂದ   ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಕಳೆದ 24 ಗಂಟೆಗಳಲ್ಲಿ ತೆಲಂಗಾಣ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ರಾಯಲಸೀಮದಲ್ಲಿ ಶುಷ್ಕ ವಾತಾವರಣವಿತ್ತು. ಆದಿಲಾಬಾದಿನಲ್ಲಿ ದಿನದ  ಅತಿ ಕಡಿಮೆ ಕನಿಷ್ಠ ತಾಪಮಾನ 14.7 ಡಿಗ್ರಿ ಸೆಲ್ಸಿಯಸ್ ಮತ್ತು ತೆಲಂಗಾಣದ ಹೈದರಾಬಾದಿನಲ್ಲಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಸುದ್ದಿ ಓದಿ