ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ : ಸಾರ್ವಜನಿಕರು ನಿಷೇಧಿತ ಪ್ರದೇಶಗಳಲ್ಲಿ ಸಂಚರಿಸದಂತೆ ಸೂಚನೆ
ಕಾರವಾರ: ಕಳೆದ 3-4 ದಿನಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವಕಾರಣಎಲ್ಲ ನದಿ, ಫಾಲ್ಸ್ ಹಾಗೂ ಜಲಾಶಯಗಳುಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಾರ್ವಜನಿಕರುಯಾವುದೇಕಾರಣಕ್ಕೂ ನಿಷೇಧಿತ ಪ್ರದೇಶದಲ್ಲಿ ಸಂಚರಿಸಬಾರದುಎಂದುಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರುಎಚ್ಚರಿಕೆನೀಡಿದ್ದಾರೆ.
ಜಿಲ್ಲಧಿಕಾರಿಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ಅಗನಾಶಿನಿ, ಕಾಳಿ ಹಾಗೂ ಗಂಗಾವಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿರುವಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ಅದಲ್ಲದೇಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಜಿಲ್ಲೆಯಜನರೂ ಸಹ ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾಕಾರ್ಯ ಪ್ರಗತಿಯಲ್ಲಿದೆ. ಸಾರ್ವಜನಿಕರುತುಂಬಾಎಚ್ಚರಿಕೆಯಿಂದ ಸಂಚರಿಸಬೇಕು. ಜೊತೆಗೆ ಮಳೆ ಹಾಗೂ ಪ್ರವಾಹದಿಂದತೊಂದರೆಯಾಗುವ ಮುನ್ಸೂಚನೆಇರುವಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಪ್ರವಾಹ ಮತ್ತು ಮಳೆಯಿಂದಾಗುವ ತೊಂದರೆಯಕುರಿತುತಕ್ಷಣ ತಹಶೀಲ್ದಾರ್, ಜಿಲ್ಲಾಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇಕಾರಣಕ್ಕೂಅಜಾಗರೂಕತೆಯಿಂದ ವರ್ತಿಸದಂತೆಮತ್ತುರಕ್ಷಣಾಕಾರ್ಯದಲ್ಲಿತೊಡಗಿದ ಅಧಿಕಾರಿಗಳಿಗೆ ಸಹಕರಿಸಬೇಕುಎಂದರು.
ಜಿಲ್ಲೆಯ ಅಂಕೋಲಾ ತಾಲೂಕಿನ 32, ಹಳಿಯಾಳ 1, ಕಾರವಾರ 27, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5 ಹಾಗೂ ಶಿರಸಿಯ 1 ಗ್ರಾಮ ಸೇರಿದಂತೆಒಟ್ಟಾರೆ 79 ಗ್ರಾಮಗಳು ನದಿ ಹಾಗೂ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದಉಂಟಾಗಿರುವ ಪ್ರವಾಹಕ್ಕೆ ಸಿಲುಕಿವೆ.ಇದರ ಪರಿಣಾಮಜಿಲ್ಲೆಯಲ್ಲಿಒಟ್ಟು 11084 ಜನರುತೊಂದರೆಗೆ ಒಳಗಾಗಿದ್ದಾರೆ. ಹೊನ್ನಾವರತಾಲೂಕಿನಲ್ಲಿ ಮೀನುಗಾರ ಮಹಿಳೆಯೊಬ್ಬರು ಹಾಗೂ ಶಿರಸಿ ತಾಲೂಕಿನಲ್ಲಿಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿಯ ಪ್ರವಾಹ ಸಿಲುಕಿ ಮೃತರಾಗಿದ್ದು, ಅವರ ಮೃತದೇಹ ಪತ್ತೆಯಾಗಿವೆ. ಹಾಗೇನೆ ಅಂಕೋಲಾ ತಾಲೂಕಿನಲ್ಲಿಇಬ್ಬರುಕಾಣಿಯಾಗಿದ್ದು, ಅವರನ್ನು ಪತ್ತೆಹಚ್ಚುವಕಾರ್ಯ ನಡೆಯುತ್ತಿದೆ.ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯ ಹೊನ್ನಾವರತಾಲೂಕಿನಲ್ಲಿ 1, ಕಾರವಾರ 5 ಹಾಗೂ ಯಲ್ಲಾಪುರ 3 ಸೇರಿದಂತೆಒಟ್ಟು9 ಮನೆಗಳು ಪೂರ್ಣ ಹಾಗೂ 55 ಮನೆಗಳು ಭಾಗಶಃ ಹಾನಿಗೊಳಗಾಗಿವೆ.ಒಟ್ಟಾರೆಯಾಗಿ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದಂತಹ ಒಟ್ಟು 3776 ಜನರನ್ನುರಕ್ಷಿಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆಎಂದರು.
ಸಂಕಷ್ಟಕ್ಕೆ ಸಿಲುಕಿದ ಜನರಆಶ್ರ್ರಯಕ್ಕಾಗಿಅಂಕೋಲಾ ತಾಲೂಕಿನಲ್ಲಿ 19, ಹಳಿಯಾಳ 1, ಕಾರವಾರ 19, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5, ಶಿರಸಿ 1 ಹಾಗೂ ಯಲ್ಲಾಪುರ 3 ಸೇರಿದಂತೆಜಿಲ್ಲೆಯಲ್ಲಿಒಟ್ಟು 58 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಎಲ್ಲಕೇಂದ್ರಗಳಲ್ಲಿ ಒಟ್ಟು3435 ಜನರುಆಶ್ರಯ ಪಡೆದಿದ್ದಾರೆ. ಅಲ್ಲದೇನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ143 ರಸ್ತೆಗಳು, 22 ಸೇತುವೆಗಳು, 7 ಶಾಲೆಗಳು, 1 ಪ್ರಾಥಮಿಕಆರೋಗ್ಯಕೇಂದ್ರ, 145 ವಿದ್ಯುತ್ ಕಂಬಗಳು, 5 ಟ್ರಾನ್ಸ್ಪಾರ್ಮರ್ಹಾನಿಗೊಳಗಾಗಿವೆ.ಯಲ್ಲಾಪುರತಾಲೂಕಿನಅರಬೈಲ್ಘಟ್ಟ, ಡಬ್ಗುಳಿ, ಕಳಚೆ, ತಡಕೆಬೈಲ್ ಹಾಗೂ ಸಿದ್ದಾಪುರದಲ್ಲಿ 8 ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಸರಿಪಡಿಸುವಕಾರ್ಯ ಪ್ರಗತಿಯಲ್ಲಿದೆಎಂದರು.
ಕದ್ರಾಜಲಾಶಯದ10 ಗೇಟ್ಗಳನ್ನ ತೆರೆಯಲಾಗಿದ್ದು, 212947 ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ. ಅದರಂತೆ ಕೊಡಸಳ್ಳಿ ಜಲಾಶಯದ 9 ಗೇಟ್ಗಳನ್ನ ತೆರೆಯಲಾಗಿದ್ದು, 183581 ಕ್ಯೂಸೆಕ್ಸ್ ನೀರನ್ನು ಹೊರಬೀಡಲಾಗಿದೆ. ನೆರೆ ಮತ್ತು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನುರಕ್ಷಿಸಲು20 ಸದಸ್ಯರು ಹಾಗೂ ಬೋಟ್ನ್ನು ಒಳಗೊಂಡ ಎನ್ಡಿಆರ್ಎಫ್ನ 1 ತಂಡ, 16 ಸದಸ್ಯರು ಹಾಗೂ ಬೋಟ್ ಒಳಗೊಂಡ ಎಸ್ಡಿಆರ್ಎಫ್ನ 1 ತಂಡ ಹಾಗೂ 17 ಸೈನಿಕರು ಮತ್ತು 5 ಜೆಮಿನಿ ಬೋಟ್ಸ್ ಒಳಗೊಂಡ ನೌಕಾ ದಳದ 2 ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೇಅಂಕೋಲಾ ತಾಲೂಕಿನಲ್ಲಿ 40, ಕಾರವಾರ 3 ಹಾಗೂ ಜೋಯಿಡಾದಲ್ಲಿ 1 ಸ್ಥಳೀಯ ಬೋಟ್ಗಳನ್ನು ರಕ್ಷಣಾಕಾರ್ಯಕ್ಕೆ ಬಳಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಪ್ರವಾಹ ಹಾಗೂ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರನ್ನುಪೊಲೀಸರುತಮ್ಮ ಪ್ರಾಣದ ಹಂಗು ತೊರೆದುರಕ್ಷಿಸುವಕಾರ್ಯದಲ್ಲಿತೊಡಗಿದ್ದಾರೆ. ಜನರೂಉತ್ತಮವಾಗಿ ಸಹಕಾರನೀಡುತ್ತಿದ್ದು, ಪ್ರತಿಯೊಬ್ಬರೂಎಚ್ಚರಿಕೆಯಿಂದಇರಬೇಕು. ಕಳೆದ2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನದಿ, ಫಾಲ್ಸ್ಗಳು ಹಾಗೂ ಜಲಾಶಯತುಂಬಿ ಹರಿಯುತ್ತಿವೆ. ಆದರೂಹುಬ್ಬಳ್ಳಿಯಿಂದ 6 ಜನಯುವಕರುಯಲ್ಲಾಪುರದ ಶಿರ್ಲೆ ಫಾಲ್ಸ್ಗೆ ವೀಕ್ಷಣೆಗಾಗಿ ಬಂದು ಸಂಕಷ್ಟಕ್ಕೆ ಸಿಲುಕಿದ್ದರು. ಅವರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದು, ಸಾರ್ವಜನಿಕರುಯಾರೂಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿಅಪರಜಿಲ್ಲಾಧಿಕಾರಿಕೃಷ್ಣಮೂರ್ತಿ ಹೆಚ್.ಕೆಅವರು ಉಪಸ್ಥಿತರಿದ್ದರು.