ತಮಿಳುನಾಡು- ಕೇರಳದಲ್ಲಿ ಭಾರಿ ಮಳೆ , ಎಚ್ಚರ ವಹಿಸಲು ಸೂಚನೆ
ಚೆನ್ನೈ, ಡಿಸೆಂಬರ್ 4: 'ಬುರೇವಿ' ಚಂಡಮಾರುತದ ಪರಿಣಾಮ ಶುಕ್ರವಾರ,
ಮತ್ತು ಶನಿವಾರ ಎರಡು ದಿನ ಮಳೆ ಮುನ್ಸೂಚನೆ ನೀಡಲಾಗಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಎಚ್ಚರ ವಹಿಸುವಂತೆ
ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಚೆನ್ನೈ ಮತ್ತು ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜೋರಾಗಿ ಗಾಳಿ ಬೀಸಲಿದ್ದು, ಹೆಚ್ಚಿನ ಮಳೆಯಾಗಬಹುದು ಇಲಾಖೆ ಮುನ್ಸೂಚನೆ ನೀಡಿದೆ.ತಮಿಳುನಾಡು ಸರ್ಕಾರ ಚಂಡಮಾರುತ ಎದುರಿಸಲು ಅಗತ್ಯ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಧುರೈ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೆ ವಿಮಾನಗಳ ಆಗಮನ ಸ್ಥಗಿತಗೊಳಿಸಲಾಗಿದೆ.
'ಬುರೇವಿ' ಚಂಡಮಾರುತ ತಮಿಳುನಾಡು ಮತ್ತು ಕೇರಳ ಕರಾವಳಿ ಭಾಗದ ಮೂಲಕ ಸಾಗಿ ಶ್ರೀಲಂಕಾಗೆ ತಲುಪಲಿದೆ ಎಂದೂ ಇಲಾಖೆ ವರದಿ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಿದೆ. ತಮಿಳುನಾಡು, ಕೇರಳ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.