ರಾಣೆಬೆನ್ನೂರ

ಭಾರೀ ಮಳೆ, ನೆಲಕಚ್ಚಿದ ಬಾಳೆ ಬೆಳೆ ಪರಿಹಾರಕ್ಕೆ ಮನವಿ

ಭಾರೀ ಮಳೆ, ನೆಲಕಚ್ಚಿದ ಬಾಳೆ ಬೆಳೆ ಪರಿಹಾರಕ್ಕೆ ಮನವಿ

ಲೋಕದರ್ಶನ ವರದಿ 


ರಾಣೇಬೆನ್ನೂರು 05: ತಾಲೂಕಿನ ಜೂಯಿಸರ ಹರಳಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ಸುರಿದ ಭಾರಿ ಗುಡುಗು ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ನೆಲಕಚ್ಚಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಕೂಡಲೆ ಸಂಬಂಧಿಸಿದ ತೋಟಗಾರಿಕಾ ಇಲಾಖೆಯ ಆದಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ವಿತರಣೆಗೆ ಮುಂದಾಗಬೇಕೆಂದು ಆಗ್ರಹಿಸಿದ ಉತ್ತರ ಕರ್ನಾಟಕ ರೈತ ಸಂಘದ ಮುಖಂಡರು ಇಲಾಖೆಯ ಆದಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ  ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ದಿವಗಿಹಳ್ಳಿ, ಉಪಾಧ್ಯಕ್ಷ ನಾರಾಯಣಪ್ಪ ಲಮಾಣಿ, ಗ್ರಾಮ ಘಟಕದ ಅಧ್ಯಕ್ಷ ಸಿದ್ದನಗೌಡ ಚೌಡಪ್ಪಳವರ, ಪರಶುರಾಮ ಬಾರ್ಕಿ, ಕುಮಾರ ಬಾರ್ಕಿ, ರಾಘವೇಂದ್ರ ಬಾರ್ಕಿ, ಗುರುರಾಜ ಸಾರದ, ಕುಮಾರ ಬೆನಕನಕೂಂಡ, ಧನರಾಜ ದೂಡ್ಡಮನಿ ಸೇರಿದಂತೆ ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ