ಆರೋಗ್ಯ ಸಂಪತ್ತು ಬಹು ಮುಖ್ಯ: ಶ್ರೀಕಾಂತ ದುಂಡಿಗೌಡ್ರ
ಲೋಕದರ್ಶನ ವರದಿ
ಶಿಗ್ಗಾವಿ 04: ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಇಂದು ಮನುಕುಲಕ್ಕೆ ಮುಖ್ಯವಾಗಿದೆ, ಗ್ರಾಮೀಣ ಜನತೆ ಕಷ್ಟದ ಬದುಕು ಸಾಗಿಸುತ್ತಿದ್ದಾರೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಅರಿವು ಇಲ್ಲದಿರುವುದು ವಿಷಾದನೀಯ ಎಂದು ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್, ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹೋತನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಸೇವೆ ವ್ಯಾಪಾರೀಕರಣವಾಗುತ್ತಿದೆ ಅನೇಕ ಕಾಯಿಲೆಗಳ ಬಗ್ಗೆ ಅರಿವೇ ಇಲ್ಲದೆ ಜನ ತಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಉತ್ತಮ ಆರೋಗ್ಯದಿಂದ ಆರೋಗ್ಯವಂತ ಸಮಾಜ ನಿಮರ್ಾಣ ಮಾಡಲು ಸಾದ್ಯಈ ಶಿಬಿರಗಳು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಭಾಜಪ ಆಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಆಯೋಜಿಸುವ ಉಚಿತ ಆರೋಗ್ಯ ಶಿಬಿರ, ಜನಪರ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಸದಾಬೆನ್ನೆಲುಬಾಗಿ ನಿಲ್ಲುತ್ತವೆಇಂತಹ ಸೇವೆಗಳಿಗೆ ನಾನು ವೈಯಕ್ತಿಕವಾಗಿ ದುಡಿಯಲು ಸದಾ ಸಿದ್ಧ, ಹಳ್ಳಿಗಳ ಬಡಜನರ ಆರೋಗ್ಯ ರಕ್ಷಣೆಗೆ ಇವರು ವಹಿಸಿರುವ ಕಾಳಜಿ ಶ್ಲಾಘನೀಯ ಎಂದರಲ್ಲದೇ, ಹೆಚ್ಚಿನ ವೆಚ್ಚ ಭರಿಸಿ ತಪಾಸಣೆ ಮಾಡಿಸಿಕೊಳ್ಳಲು ಬಡವರಿಗೆ ಕಷ್ಟ. ಇಂಥ ಶಿಬಿರಗಳಿಂದ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರಲ್ಲದೇ ಈ ಸಾಮಾಜಿಕ ಕಾಳಜಿಯ ಶಿಬಿರದ ಪ್ರಯೋಜನವನ್ನು ಹೆಚ್ಚಿನ ಜನತೆ ಪಡೆಯುವಂತಾಗಲಿ ಎಂದು ಹೇಳಿದರು.
ಡಾ. ಕ್ರಾಂತಿಕಿರಣ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ನಾವು ಆರೋಗ್ಯವಾಗಿದ್ದರೆ ಮಾತ್ರ ಏನನ್ನಾದರು ಸಾಧಿಸಬಹುದು ನಾವು ಆರೋಗ್ಯವಾಗಿದ್ದು, ಸಮಾಜದ ಆರೋಗ್ಯವನ್ನು ಕಾಪಾಡುವುದರ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಸಿಂದಗಿ ಮಠದ ಶಂಭುಲಿಂಗ ಶ್ರೀಗಳು ಸಾನಿದ್ಯ ವಹಿಸಿದ್ದರು. ಮೃತ್ಯುಂಜಯ ಸಂಸ್ಥೆ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಮಾತನಾಡಿದರು. ಕಾರ್ಯಕ್ರಮದಲ್ಲಿ ನರಹರಿಕಟ್ಟಿ, ಗ್ರಾ. ಪಂ.ಅಧ್ಯಕ್ಷೆ ಲಲಿತಾ ಸವಣೂರ, ಗ್ರಾ.ಪಂ. ಉಪಾಧ್ಯಕ್ಷ ಬಸನಗೌಡ ಕೆಮ್ಮಣ್ಣಕೇರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗಪ್ಪ ಮೂಡೂರ, ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಧರ್ಮಣ್ಣ ಭಂಗಿಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಶಿಬಿರದಲ್ಲಿ 600 ಜನ ನೋಂದಾಯಿಸಿಕೊಂಡು ಉಚಿತ ಆರೋಗ್ಯ ಶಿಬಿರದ ಲಾಭ ಪಡೆದುಕೊಂಡರು, ನೇತ್ರ ತಪಾಸಣಾ ವಿಭಾಗದಲ್ಲಿ 250 ಜನರನ್ನು ತಪಾಸಿಸಿ ಅದರಲ್ಲಿ 22 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು ಚಂದ್ರಣ್ಣ ಬೆಳವತ್ತಿ ಸ್ವಾಗತಿಸಿ, ನಿರೂಪಿಸಿದರು