ಬಳ್ಳಾರಿ

ಸುರಕ್ಷಿತ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ; ಡಾ.ನಿಜಾಮುದ್ದೀನ್

ಸುರಕ್ಷಿತ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ; ಡಾ.ನಿಜಾಮುದ್ದೀನ್

ವಿಶ್ವ ಆಹಾರ ಸುರಕ್ಷತಾ ದಿನ ಆಚರಣೆ 

ಬಳ್ಳಾರಿ 08 :ಎಲ್ಲರೂ ಪ್ರತಿದಿನ ಸುರಕ್ಷಿತ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಗೌತಮ್ ನಗರದ ನಮ್ಮ ಕ್ಲಿನಿಕ್‌ನ  ವೈದ್ಯ ಡಾ.ನಿಜಾಮುದ್ದೀನ್ ಹೇಳಿದರು. 

ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯ ಅಂಗವಾಗಿ ಗೌತಮ್ ನಗರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ‘ಸುರಕ್ಷಿತ ಆಹಾರ-ಉತ್ತಮ ಅರೋಗ್ಯ’ ಘೋಷವಾಕ್ಯದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಆಹಾರ ಸುರಕ್ಷತಾ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. 

ಅಸುರಕ್ಷಿತಾ ಆಹಾರ ಸೇವನೆಯಿಂದ ವಿಶ್ವದಲ್ಲಿ ಪ್ರತಿ ದಿನ 16 ಲಕ್ಷ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರತಿದಿನ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 340 ಮಕ್ಕಳು ಸಾವಿಗಿಡಾಗುತ್ತಿದ್ದಾರೆ. ಅಸುರಕ್ಷಿತಾ ಆಹಾರ ಸೇವನೆಯಿಂದ ಅತಿಸಾರ, ಭೇದಿಯಿಂದ ಕ್ಯಾನ್ಸರ್‌ವರೆಗೂ ಸುಮಾರು 200 ಕಾಯಿಲೆಗಳು ಹರಡುತ್ತವೆ ಎಂದು ತಿಳಿಸಿದರು. 

ನಾಳಿನ ಪೌರರಾಗುವ ಇಂದಿನ ವಿದ್ಯಾರ್ಥಿಗಳು ಸುರಕ್ಷಿತಾ ಆಹಾರದ ಬಗ್ಗೆ ತಿಳಿದುಕೊಂಡು ಕ್ರಮವಹಿಸಿದರೆ ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.  

ಕಲುಷಿತ ಆಹಾರ ಸೇವನೆ, ತಂಗಳ ಊಟ ಸೇವನೆಯಿಂದ ಆರೋಗ್ಯ ಹಾಳುಗುತ್ತಿದೆ. ಹೊರಗಿನ ಆಹಾರ ಸೇವನೆ ತ್ಯಜಿಸಬೇಕು. ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದರು. 

ಈ ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ಸಿಬ್ಬಂದಿ ಕಲ್ಪನಾ, ನರೇಶ್, ವೀರಭದ್ರ, ಆಶಾ ಕಾರ್ಯಕರ್ತೆಯರಾದ ಷಾಜೀಯಾ, ಗೀತಾ ಮತ್ತು ಶಾಲಾ ಮಕ್ಕಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. 

ಸುದ್ದಿ ಓದಿ