ಆರ್ಟಿಇಎಸ್ ಮಹಾವಿದ್ಯಾಲಯದಲ್ಲಿ ಆರೋಗ್ಯ ತಪಾಷಣಾ ಶಿಬಿರ
ರಾಣಿಬೆನ್ನೂರ 21: ನಗರ ಹೊರವಲಯದ ಆರ್ಟಿಇಎಸ್ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯದ ಸಾವುಕಾರ ಸಭಾಭವನದಲ್ಲಿ ಇತ್ತೀಚಿಗೆ ಹೃದಯಾಘಾತ ಮುಂಜಾಗೃತ ಕ್ರಮಗಳ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರವು ಆಯೋಜಿಸಲಾಗಿತ್ತು.
ದಾವಣಗೇರೆ ನಾರಾಯಣ ಹೃದಯಾಲಯದ ವೈದ್ಯ ಪ್ರಸನ್ನಕುಮಾರ ಎ.ಪಿ. ಅವರು ಹೃದಯಾಘಾತದ ಲಕ್ಷಣಗಳು, ಸಂಭವಿಸಿದಾಗ ಶೀಘ್ರವೇ ತಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಸಮಗ್ರವಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕಾಲೇಜು ಪ್ರಾಚಾರ್ಯ ಎಫ್.ಹೆಚ್.ಮಾಚೇನಹಳ್ಳಿ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಸರಸ್ವತಿ ಬಮ್ಮನಾಳ, ಐ.ಕ್ಯೂ.ಎ.ಸಿ ಸಂಯೋಜಕ ಡಾ. ಮಧುಕುಮಾರ್ ಆರ್, ಕಾರ್ಯಕ್ರಮಾಧಿಕಾರಿ ಶಿವಕುಮಾರ ಬೆಣ್ಣಿ ಸೇರಿದಂತೆ ಉಪನ್ಯಾಸಕರು, ವಿವಿಧ ವಿಭಾಗಗಳ ಸಿಬ್ಬಂದಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.