ಆರ್ಟಿಈಎಸ್ ಕಾಲೇಜಿನಲ್ಲಿ ಆರೋಗ್ಯ ಅರಿವು ಜಾಗೃತಿ
ಲೋಕದರ್ಶನ ವರದಿ
ರಾಣೀಬೆನ್ನೂರ 28: ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಈ ಹಿಂದಿಗಿಂತಲೂ ಇಂದಿನ ದಿನಗಳಲ್ಲಿ ಬಹು ಜಾಗೃತಿ ವಹಿಸಿಕೊಳ್ಳಬೇಕಾದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾಥರ್ಿಗಳು ತಮ್ಮ ಸಾಮಾಜಿಕ ಹೊಣೆಯನ್ನು ಅರಿತುಕೊಂಡು ತಮ್ಮ ಸುತ್ತ-ಮುತ್ತಲ ಪರಿಸರದಲ್ಲಿ ಜನಜಾಗೃತಿಗೊಳಿಸುವುದರ ಮೂಲಕ ತಮ್ಮ ಸಾಮಾಜಿಕ ಕಾಳಜಿಯನ್ನು ಮೆರೆಯಲು ಮುಂದಾಗಬೇಕು ಎಂದು ತಾಲೂಕ ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ ಹೇಳಿದರು.
ಅವರು ನಗರ ಹೊರವಲಯದ ಆರ್ಟಿಈಎಸ್ ಕಾಲೇಜು ಸಾವಕಾರ ಸಭಾ ಭವನದಲ್ಲಿ ಕರ್ನಾಟಕ ಸಕರ್ಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಯರ್ಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾಯರ್ಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಸಕರ್ಾರವು ಆರೋಗ್ಯ ರಕ್ಷಣೆಗಾಗಿ ಅನೇಕ ರೀತಿಯ ಜಾಗೃತಿಗೊಳಿಸುವ ಯೋಜನೆಗಳು ಜಾರಿಗೆ ತಂದಿದೆ. ಅದರ ಮೂಲಕ ತರಬೇತಿ ಕಾಯರ್ಾಗಾರಗಳು ಹಂತ-ಹಂತವಾಗಿ ಸಾಗುತ್ತಲಿವೆ. ಸಾರ್ವಜನಿಕರು ಆರೋಗ್ಯದ ಅರಿವು ಹೊಂದಿದಾಗ ಮಾತ್ರ ಆರೋಗ್ಯಯುತ ಸಮಾಜ ನಿಮರ್ಾಣವಾಗಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ ಪಾಟೀಲ, ಆರೋಗ್ಯ ನಿರೀಕ್ಷಕ ನಾಗರಾಜ ಕುಡಪಲಿ, ನಿರೀಕ್ಷಣಾ ಅಧಿಕಾರಿಗಳಾದ ದೇವೆಂದ್ರಪ್ಪ ಡಿ.ಎಸ್. ಎಸ್.ಎಸ್.ಕೋರಿ, ಪ್ರಾಚಾಯ್ ಎಫ್.ಎಚ್.ಮಾಚೇನಹಳ್ಳಿ, ಡಾ. ಸರಸ್ವತಿ ಬಮ್ಮನಾಳ, ಐಕ್ಯೂಎಸಿ ಸಂಯೋಜಕ ಮಧು ಕುಮಾರ ಆರ್., ರಮೇಶ ಎಂ.ಜಿ. ಮನ್ವರ್ ಅಲಿಖಾನ್, ಪಿ.ಬಿ.ಕೊಪ್ಪಳ ಸೇರಿದಂತೆ ವಿದ್ಯಾಥರ್ಿಗಳು ಸ್ವಯಂ ಸೇವಕರು, ಉಪನ್ಯಾಸಕರು ಪಾಲ್ಗೊಂಡಿದ್ದರು