ಶಿಗ್ಗಾವ್

ಸಮಾಜಕ್ಕೆ ಒಳ್ಳೆಯದನ್ನು ಬಯಸುವ ಸ್ವಭಾವವಿರಲಿ: ಗುರುನಗೌಡ

ಸಮಾಜಕ್ಕೆ ಒಳ್ಳೆಯದನ್ನು ಬಯಸುವ ಸ್ವಭಾವವಿರಲಿ: ಗುರುನಗೌಡ

ಶಿಗ್ಗಾವಿ 08: ರಾಮಾಯಣ ಅನ್ನುವಂತ ಮಹಾನ ಗ್ರಂಥವನ್ನು ನಾಡಿಗೆ ನೀಡಿ ಇಡಿ ಮನುಕುಲಕ್ಕೆ ಮಾದರಿಯಾದ ಮಹರ್ಷಿ ವಾಲ್ಮೀಕಿ ಕುಲದವರಾದ ನಾವು ಅಂತಹ ಮಹಾನ್ ಪುರುಷನ ಮಾರ್ಗದರ್ಶನದಂತೆ ಸಮಾಜಕ್ಕೆ ಒಳ್ಳೆಯದನ್ನು ನಾವೆಲ್ಲರೂ ಬಯಸುವ ಸ್ವಭಾವವನ್ನು ಹೊಂದಬೇಕೆಂದು ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಗುರುನಗೌಡ ಪಾಟೀಲ ಹೇಳಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಏರಿ​‍್ಡಸಿದ್ದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನೂತನವಾಗಿ ವಾಲ್ಮೀಕಿ ಮಹಾಸಭಾಕ್ಕೆ ಉತ್ಸಾಹಿ ಯುವಕರು ಸೇರಿದಂತೆ ಹಿರಿಯರನ್ನೊಳಗೊಂಡ ಕಮಿಟಿಯಾಗಿದ್ದು ತಾವುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಕೆಲಸ ಮಾಡಬೇಕು. ಸಮಾಜದ ಅನೇಕ ಜನರಿಗೆ ಇನ್ನು ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲಾ. ಅಂತವರ ಪರವಾಗಿ ಕೆಲಸ ಮಾಡುವದರೊಂದಿಗೆ ಮತ್ತಷ್ಟು ಬಲಿಷ್ಟಗೊಳಿಸಿ ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಸಮಾಜದ ಮಕ್ಕಳು ಹೆಚ್ಚಿನ ವಿದ್ಯಾಬ್ಯಾಸಕ್ಕೆ ಆರ್ಥಿಕ ತೊಂದರೆಯಾದಾಗ ನಮ್ಮ ಕೈಲಾದ ಸಹಾಯ ಮಾಡೋಣ ಎಂದ ಅವರು ನೂತನ ಪದಾಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. 

ಗೌರವ ಅಧ್ಯಕ್ಷರಾಗಿ ಮಲ್ಲೇಶಪ್ಪಾ ಚೊಟಪ್ಪನವರ, ಕಾರ್ಯಾಧ್ಯಕ್ಷರಾಗಿ ಮಂಜುನಾಥ ಓಲೇಕಾರ, ಉಪಾಧ್ಯಕ್ಷರುಗಳಾಗಿ ಚಂದ್ರು ಓಲೇಕಾರ, ಅಣ್ಣಪ್ಪ ವಾಲ್ಮೀಕಿ, ಮುತ್ತಪ್ಪಾ ಷಣ್ಮನಿ ಆನಂದ ಕೆಳಗಿನಮನಿ, ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪ ತಳವಾರ, ಖಜಾಂಜಿ ಸುರೇಶ ತಳವಾರ, ಕಾರ್ಯದರ್ಶಿ ಮಾರುತಿ ನೀಲಮ್ಮನವರ, ಹನುಮಂತಪ್ಪ ಕರೆಣ್ಣನವರ, ಪುಟ್ಟಪ್ಪಾ ವಾಲ್ಮೀಕಿ, ದೇವರಾಜ ದೊಡ್ಡಮನಿ, ಕಿರಣ ಕರಿಯಪ್ಪನವರ, ದೇವನಗೌಡಾ ಗವೆಪ್ಪನವರ, ಮಂಜುನಾಥ ಮಲ್ಲಾಡದ ಸೋಮಣ್ಣ ಬೆಳವಲಕೊಪ್ಪಾ, ಸಂಘಟನಾ ಕಾರ್ಯದರ್ಶಿಗಳಾಗಿ ಬಸಪ್ಪ ವಾಲಿಕಾರ, ಸುರೇಶ ವಾಲ್ಮೀಕಿ, ಸುರೇಶ ಬಡಪ್ಪನವರ, ಫಕ್ಕಿರೇಶ ರಿತ್ತಿ, ಸುರೇಶ ಶೆಟ್ಟೆಣ್ಣವರ, ಮಂಜುನಾಥ ಮೆಣಸಿನಕಾಯಿ, ಸುಭಾಷ ವಾಲ್ಮೀಕಿ, ರಮೇಶ ದೇವಗೆರಿ, ನಾಗರಾಜ ದೊಡ್ಡಮನಿ ಇವರುಗಳನ್ನು ತಾಲೂಕಾ ಸಮಿತಿಗೆ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. 

ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗರಾಜ ಬಡಮ್ಮನವರ, ತಾಲೂಕಾ ಅಧ್ಯಕ್ಷ ಯಲ್ಲಪ್ಪಾ ತಳವಾರ, ಭೀಮಣ್ಣಾ ಡಾವಣಗೆರಿ, ಗದಿಗೆಪ್ಪಾ ದೊಡ್ಡಮನಿ ಸೇರಿದಂತೆ ಅನೇಕರು ಹಾಜರಿದ್ದರು. 


ಸುದ್ದಿ ಓದಿ