ಬೈಲಹೊಂಗಲ

ತಾಲೂಕಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನ

ತಾಲೂಕಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನ

ಬೈಲಹೊಂಗಲ 14: ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹರ್, ಘರ್ ತಿರಂಗಾ ಅಭಿಯಾನ ಅಂಗವಾಗಿ ಶನಿವಾರ ತ್ರಿವರ್ಣ ಧ್ವಜದ ಭವ್ಯ ಮೆರವಣಿಗೆ ನಡೆಯಿತು. 

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ತ್ರಿವರ್ಣ ಧ್ವಜಗಳ ಮೆರವಣಿಗೆಗೆ ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ, ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸಂಜಯ ಸಿದ್ಧನ್ನವರ ಚಾಲನೆ ನೀಡಿದರು. 

   ತ್ರಿವರ್ಣ ಧ್ವಜಗಳ ಮೆರವಣಿಗೆ ಬಜಾರ ರಸ್ತೆ ಮಾರ್ಗವಾಗಿ ಅಂಬೇಡ್ಕರ ಉದ್ಯಾನದವರೆಗೆ ನೆರವೇರಿತು. ದಾರಿಯುದ್ದಕ್ಕೂ ನೂರಾರು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗಿದರು. ಭಾರತ ಮಾತಾಕೀ, 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಜೈ ಎಂದು ಘೋಷಣೆ ಹಾಕಿದರು. ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸದಸ್ಯರಾದ ಬಾಬು ಕುಡಸೋಮಣ್ಣವರ, ಜಗದೀಶ ಜಂಬಗಿ, ಬುಡ್ಡೇಸಾಬ ಶಿರಸಂಗಿ, ಅನೇಕರು ಇದ್ದರು 

ಸುದ್ದಿ ಓದಿ