ಕುಷ್ಟಗಿ

ಹರ್ ಘರ್ ಜಲ್ ವಿಶೇಷ ಗ್ರಾಮಸಭೆ

ಹರ್ ಘರ್ ಜಲ್ ವಿಶೇಷ ಗ್ರಾಮಸಭೆ


ಲೋಕದರ್ಶನ ವರದಿ  

ಕುಷ್ಟಗಿ 02:  ತಾಲೂಕಿನ ಸಂಗನಾಳ ಗ್ರಾಮ ಪಂಚಾಯತಿಯ ಕನ್ನಾಳ, ಮೆತ್ತಿನಾಳ ಗ್ರಾಮಗಳಲ್ಲಿ ಹರ್ ಘರ್ ಜಲ ಕುರಿತು ವಿಶೇಷ ಗ್ರಾಮಸಭೆ ಜರುಗಿತು.   


ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಮಾತನಾಡಿ ಪ್ರತಿಯೊಂದು ಕುಟುಂಬವು ಹರ್ ಘರ್ ಜಲ್ (ಮನೆ-ಮನೆಗೆ ಗಂಗೆ) ಹೊಂದಬೇಕು ಈ ದಿಸೆಯಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಈ ಕುರಿತು ಪ್ರತಿ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಜರುಗಿಸುವ ಮೂಲಕ ಜನರಿಗೆ ಅರಿವು ಮೂಡಿಸಲು ಕ್ರಮವಹಿಸಲಾಗಿದೆ ಎಂದರು. ಗ್ರಾಮವನ್ನು ಸಂಪೂರ್ಣ ಹರ್ ಘರ್ ಜಲ್ ಸಂಪೂರ್ಣ ಗ್ರಾಮವನ್ನಾಗಿ ಘೋಷಿಸಲಾಯಿತು.  

ಈ ಸಂದರ್ಭದಲ್ಲಿ ಸಂಗನಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗುರ​‍್ಪ ನಾಯಕ, ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್, ಕನಕಮ್ಮ ಫಕೀರ​‍್ಪ ಕಿರಿಯ ಅಭಿಯಂತರರಾದ ವಿನಾಯಕ, ಯಾಸೀನ್ ಹಾಜರಿದ್ದರು  

ಕಾರ್ಯನಿರ್ವಾಹಕ ಅಧಿಕಾರಿಗಳು ಕಿಲ್ಲಾರಹಟ್ಟಿ  ಗ್ರಾಮ ಪಂಚಾಯತಿಯ  ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು 03 ದಿನಗಳ ಒಳಗಾಗಿ ಮುಕ್ತಾಯಗೊಳಿಸುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿ ರಾಮಣ್ಣ ದಾಸರಗೆ ಸೂಚಿಸಿದರು. 


ಸುದ್ದಿ ಓದಿ