ಹನುಮಾಪುರ: ನಿವೃತ್ತ ಶಿಕ್ಷಕ ಸುರೇಶ ರಿತ್ತಿಗೆ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರು 02: ಸಮಾಜದಲ್ಲಿ ಗುರು ಮತ್ತು ಗುರು ಪರಂಪರೆಗೆ ವೇದ ಇತಿಹಾಸ ಕಾಲಗಳಿಂದಲೂ ಸದಾ ಕಾಲ ಗೌರವ ಅಭಿಮಾನ ಮತ್ತು ಸನ್ಮಾನ ಇವುಗಳು ಯಾವುದೇ ಅಡೆ ತಡೆ ಇಲ್ಲದೇ ಅತ್ಯಂತ ಆತ್ಮಾಭಿ ಪೂರ್ವಕವಾಗಿ ಸಾಗಿ ಬಂದಿದೆ ಇದು ಇಂದು ಮುಂದೆ ಎಂದೆಂದು ಸಾಗುತ್ತಲೆ ಇರುತ್ತದೆ ಎಂದು ಭಾರತೀಯ ನಿವೃತ್ತ ಸೈನಿಕ ನೂಲೇಶಿ ಲಮಾಣಿ ಹೇಳಿದರು.
ಅವರು ತಾಲೂಕಿನ ಹನುಮಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಭವನದಲ್ಲಿ ನಡೆದ ಶಾಲೆಯ ನಿವೃತ್ತ ಶಿಕ್ಷಕ ಸುರೇಶ ರಿತ್ತಿ ಅವರ ವಯೋ ನಿವೃತ್ತಿ ಬೀಳ್ಕೂಡುಗೆ ಹಾಗೂ ಶಿಷ್ಯ ಬಳಗವು ಆಯೋಜಿಸಿದ್ದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಿತ್ತಿ ಗುರುಗಳು ಗ್ರಾಮದ ಮಕ್ಕಳ ಭವಿಷ್ಯತ್ತಿಗಾಗಿ ಸದಾ ಕಾಲ ಶ್ರಮಿಸಿದವರಾಗಿದ್ದಾರೆ ಇಂದು ನಡೆಯುತ್ತಿರುವ ಅವರ ಅಭಿನಂದನಾ ಸನ್ಮಾನವು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಗ್ರ ಗುರು ಬಳಗಕ್ಕೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾತನಾಡಿದ ಸುರೇಶ ರಿತ್ತಿ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ತಮಗೆ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯದ ಫಲವೆಂದು ಭಾವಿಸಿದ್ದೇನೆ ಈ ಕ್ಷೇತ್ರದಲ್ಲಿ ಯಾರೇ ಸೇವೆ ಸಲ್ಲಿಸಿದರೂ ಅವರೆಲ್ಲರೂ ಮಹಾ ಅದೃಷ್ಠವಂತರು. ಮುಂದಿನ ಜನ್ಮದಲ್ಲಿ ಜನ್ಮ ತಾಳುವುದೇ ನೀಜವಾದಲ್ಲಿ ಪುನಃ ಶಿಕ್ಷಕನಾಗೆ ಇರಬೇಕೆನ್ನುವ ಮಹಾ ಸಂಕಲ್ಪ ನನ್ನದಾಗಿದೆ ಎಂದ ಅವರು ಶಿಷ್ಯ ಪರಂಪರೆ ತಮಗೆ ನೀಡಿರುವ ಗುರು ಗೌರವ ತಮ್ಮ ಜೀವನದಲ್ಲಿ ಅತೀವ ಸಂತೋಷ ತಂದಿದೆ ಎಂದರು.
ಸುರೇಶ ರಿತ್ತಿ ಅವರಿಗೆ 40 ಸಾವಿರ ರೂಗಳ ಮೌಲ್ಯದ ಕೂಡುಗೆಯನ್ನು ನೀಡಿ ಸನ್ಮಾನಿಸಿ ಧನ್ಯತೆ ಪಡೆದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.