ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಭಲ ಆಂಕಾಕ್ಷಿ ಹನುಮಂತಪ್ಪ ಬಂಡಿವಡ್ಡರ
ಶಿಗ್ಗಾವಿ 19: ಮಾಜಿ ಪ್ರಧಾನಿ ಇಂದಿರಾಗಾಂದಿಯವರು ಗರಿಬಿ ಹಠಾವೋ ಅಂತಾ 20 ಅಂಶಗಳ ಕಾರ್ಯಕ್ರಮದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಇಂತಹ ಕಾರ್ಯಕ್ರಮ ಕೈಗೊಂಡರು ಎಂದು ನ್ಯಾಯವಾದಿ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಭಲ ಆಂಕಾಕ್ಷಿ ಹನುಮಂತಪ್ಪ ಬಂಡಿವಡ್ಡರ ಹೇಳಿದರು.
ಪಟ್ಟಣದ ಕಿತ್ತೂರ ಚೆನ್ನಮ್ಮ ಹಾಗೂ ಅಂಬೇಡ್ಕರ ಪುತ್ತಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರುಆದರೆ ಇಂದು ಬಡವರನ್ನೆ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸನಲ್ಲಿ ದುಡಿಸಿಕೊಂಡು ಟಿಕೆಟ್ನ್ನು ಬೇರೆಯವರಿಗೆ ಮಾರಾಟ ಮಾಡಿಕೊಳ್ಳುವದಾದರೆ ಹೈ ಕಮಾಂಡನವರು ಶಿಗ್ಗಾವಿ ಉಪಚುನಾವಣೆಗೆ ಬರಬಾರದು. ನಿಜವಾದ ಹಾಗೂ ಪ್ರಾಮಾಣಿಕವಾಗಿ ಸಂಘಟನೆ ಮಾಡಿದ ಕಾರ್ಯಕರ್ತನಿಗೆ ಟಿಕೇಟ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ನೂರಹ್ಮದ ಮಾಳಗಿ, ವಕ್ತಾರ ಮಂಜುನಾಥ ಮಣ್ಣಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.