ವಿವಿಧ ಪೂಜಾ ವಿಧಾನಗಳಿಂದ ಹನುಮ ಜಯಂತಿ ಆಚರಣೆ
ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ನೇರ ದೃಷ್ಠಿ ಆಂಜನೇಯ ಸಮಿತಿಯ ನೇತೃತ್ವದಲ್ಲಿ 20 ನೇ ವರ್ಷದ ಹನುಮ ಜಯಂತಿಯನ್ನು ವಿಶೇಷ ಕುಂಕುಮಾರ್ಚನೆ ಪೂಜೆ ಪುನಸ್ಕಾರ ಮತ್ತು ಹೋಮ ಹವನ ಅಲ್ಲದೇ ತೋಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು ನಂತರ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ನೇರ ದೃಷ್ಠಿ ಆಂಜನೇಯ ಸಮಿತಿಯ ಸರ್ವ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು