ಬೆಳಗಾವಿ

ಆಗಸ್ಟ್‌ 24 ಮತ್ತು 25ರಂದು ಹಣ್ಣಿಕೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

ಆಗಸ್ಟ್‌ 24 ಮತ್ತು 25ರಂದು ಹಣ್ಣಿಕೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

ಬೆಳಗಾವಿ 04 : ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಆಗಸ್ಟ್‌ 24 ಮತ್ತು 25ರಂದು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಣ್ಣಿಕೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ​‍್ಿ) ಎಸ್‌. ಎಸ್‌. ಪಾಟೀಲ ತಿಳಿಸಿದ್ದಾರೆ. ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್‌ 24ರಂದು ಅಥ್ಲೆಟಿಕ್ಸ್‌ (ಮೈದಾನ ಸ್ಪರ್ಧೆಗಳು) ಹಾಗೂ ಆಗಸ್ಟ್‌ 25ರಂದು ಗುಂಪು ಆಟಗಳ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಅಥ್ಲೆಟಿಕ್ಸ್‌ ಹಾಗೂ ಗುಂಪು ಆಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕ ಪೂರ್ವ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಆಗಸ್ಟ್‌ 17ರೊಳಗೆ ಕ್ಲಸ್ಟರ್ನ ಎಲ್ಲ ಕ್ರೀಡಾಪಟುಗಳ ಪಟ್ಟಿಯನ್ನು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲಿಸುವಂತೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಹಣ್ಣಿಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ವಿ.ಸಿ. ಅಡಕಿ, ಬಿ.ಎಂ. ಕಡೋಲ್ಕರ್, ಪಿ.ಎಂ. ಜೋರಾಪುರ ಮಾತನಾಡಿದರು. ಎಸ್‌.ಬಿ. ಲಠ್ಠೆ ಸ್ವಾಗತಿಸಿದರು.  ಸಭೆಯಲ್ಲಿ ಆರಿ​‍್ಬ. ಮಲ್ಲೂರ, ಪ್ರಕಾಶ ನಾಯ್ಕರ, ಬಿ.ಎಲ್‌. ಇಂಚಲ, ಎಂ.ವಿ. ಪಾಟೀಲ, ಓ.ಎಸ್‌. ಚಿಕ್ಕಲದಿನ್ನಿ, ಆರ್‌.ಎಫ್‌. ಪಾಟೀಲ ಸೇರಿದಂತೆ ಹಣ್ಣಿಕೇರಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ