ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರವರಿಗೆ ಹಸ್ತಾಂತರ
ಜಮಖಂಡಿ 13: ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡರು.
ನಿಕಟಪೂರ್ವ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರು ಅಧಿಕಾರವನ್ನು ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರ ಅವರಿಗೆ ಹಸ್ತಾಂತರಿಸಿದರು. ಈ ಹಿಂದೆ ಬಾಗಲಕೋಟೆ ಮತ್ತು ವಿಜಯಪೂರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.
ಈ ವೇಳೆ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರು ನೂತನ ಉಪವಿಭಾಗಾಧಿಕಾರಿ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.