ತಾಳಿಕೋಟಿ

ಹಡಗಿನಾಳ ರಸ್ತೆ ದುರಸ್ತಿ ಆಗದೆ ಸಂಪೂರ್ಣ ಹದಗೆಟ್ಟಿದೆ

ಹಡಗಿನಾಳ ರಸ್ತೆ ದುರಸ್ತಿ ಆಗದೆ ಸಂಪೂರ್ಣ ಹದಗೆಟ್ಟಿದೆ

ತಾಳಿಕೋಟಿ 12:  ಪಟ್ಟಣದಿಂದ ಹಡಗಿನಾಳ ಮೂಲಕ ಮೂಕಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಆಗದೆ ಸಂಪೂರ್ಣ ಹಾಳಾಗಿ ಹೋಗಿರುವುದರಿಂದ ಇಲ್ಲಿಂದ ವಿವಿಧ ಗ್ರಾಮಗಳಿಗೆ ಸಂಚರಿಸುವ ಗ್ರಾಮೀಣ ಭಾಗದ ಜನರಿಗೆ ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ. ಪಟ್ಟಣದ ಪಕ್ಕದಲ್ಲಿ ಹರಿದು ಹೋಗುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆ ಕಾಮಗಾರಿ ಮುಗಿದು ಹೋಗಿದ್ದರು ರಸ್ತೆ ನಿರ್ಮಾಣ ಆಗದೇ ಇರುವುದರಿಂದ ರಸ್ತೆ ತುಂಬಾ ತಗ್ಗು ಗುಂಡಿಗಳು ಬಿದ್ದು ಸಂಚಾರ ದುಃಸ್ತರವಾಗಿ ಮಾರ​‍್ಪಟಟಿದೆ ಇತ್ತೀಚಿಗೆ ಈ ಭಾಗದಲ್ಲಿ ಸುರಿದ ಮಳೆಯಿಂದಾಗಿ ತಗ್ಗು ಗುಂಡಿಗಳು ನೀರಿನಿಂದ ಆವೃತವಾಗಿ ರಸ್ತೆ ಎಲ್ಲಿದೆ ಎಂದು ಗೊತ್ತಾಗುವುದೇ ಇಲ್ಲ. ಇದರಿಂದ ದ್ವಿಚಕ್ರ ವಾಹನ ಸವಾರರು ಎಷ್ಟೋ ಬಾರಿ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿದ್ದಾರೆ. ಸುಮಾರು 3 ಕಿ. ಮೀ. ನಷ್ಟಿರುವ ಈ ರಸ್ತೆಯನ್ನು ಕ್ರಮಿಸಲು 15 ರಿಂದ 20 ನಿಮಿಷ ಬೇಕಾಗುತ್ತದೆ.  ಈ ಕ್ಷೇತ್ರದ ಮಾಜಿ ಶಾಸಕರು ಈ ರಸ್ತೆಯನ್ನು ಮಾಡಲು ಆಸಕ್ತಿ ತೋರಿದ್ದರು. ಕಾಮಗಾರಿಯ ಟೆಂಡರ್ ಆಗದ ಕಾರಣ ಹಾಗೂ ಚುನಾವಣೆಗಳು ಸಮೀಪದಲ್ಲಿ ಇದ್ದ ಕಾರಣ ಇದು ಹಾಗೆ ಉಳಿಯಿತು ಈಗ ಮಳೆಗಾಲ ಇರುವುದರಿಂದ ಕಾಮಗಾರಿಯನ್ನು ಆರಂಭಿಸುವ ಹಾಗಿಲ್ಲ ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಈ ರಸ್ತೆ ಕೆಲಸ ಮಾಡಿ ಮುಗಿಸಲು ಪ್ರಯತ್ನಿಸಬೇಕಾಗಿದೆ . ಹಾಲಿ ಶಾಸಕ ಅಪ್ಪಾಜಿ ನಾಡಗೌಡರ ಅವಧಿಯಲ್ಲಿಯೇ ಈ ಸೇತುವೆ ಕಾಮಗಾರಿ ಅನುಮತಿ ಹಾಗೂ ಅನುದಾನ ಸಿಕ್ಕಿತ್ತು ಇದನ್ನು ಈ ಭಾಗದ ಗ್ರಾಮಸ್ಥರು ಇನ್ನು ಮರೆತಿಲ್ಲ ಈಗ ಮತ್ತೆ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಆಸಕ್ತಿವಹಿಸಿ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕಾಗಿದೆ. ಈ ಮುಖ್ಯ ರಸ್ತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜೊತೆಗೆ ಇಲ್ಲಿಂದ ತಮ್ಮ ಹೊಲಗದ್ದೆ ಗಳಿಗೆ ಹೋಗುವ ರೈತರಿಗೂ ಒಂದು ಮುಖ್ಯ ರಸ್ತೆಯಾಗಿದೆ. ಇವರೆಲ್ಲರೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಆದಷ್ಟು ಬೇಗ ಈ ರಸ್ತೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ ಗ್ರಾಮಸ್ಥರು ತಳಿಸಿದ್ದಾರೆ. 


ಸುದ್ದಿ ಓದಿ