ಹೂವಿನ ಹಡಗಲಿ

ಹಡಗಲಿ ಬಾಲಕಿಯರ ಪಿಯುಸಿ ಕಾಲೇಜು ಶೇ.77 ಫಲಿತಾಂಶ

ಹಡಗಲಿ ಬಾಲಕಿಯರ ಪಿಯುಸಿ  ಕಾಲೇಜು ಶೇ.77  ಫಲಿತಾಂಶ

ಲೋಕದರ್ಶನ ವರದಿ 

ಹೂವಿನ ಹಡಗಲಿ 9:  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಸೊಪ್ಪಿನ ಕಾಳಮ್ಮ ಬಾಲಕಿಯರ ಕಾಲೇಜಿನ ಅಮೋಘ ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು 219 ವಿದ್ಯಾರ್ಥಿನಿಯರಲ್ಲಿ 21 ಡಿಸ್ಟಿಂಕ್ಷನ್, 106 ಪ್ರಥಮ ಶ್ರೇಣಿ ಸೇರಿದಂತೆ ಒಟ್ಟು 77 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಾಣಿಜ್ಯಶಾಸ್ತ್ರ ವಿಭಾಗದ ಹಕ್ಕಂಡಿ ಭೀಮವ್ವ 578 ಅಂಕಗಳು, ಕಲಾ ವಿಭಾಗದ ಕುರಿ ಸುಮಿತ್ರ 569 ಅಂಕಗಳು, ಶಯನಾಬೀ 563 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಕಲಾ ವಿಭಾಗದ ಸಿಮ್ರನ್ ತಾಜ್ 548 ಅಂಕ, ವಾಣಿಜ್ಯ ವಿಭಾಗದ ಹಕ್ಕಂಡಿ ಸೃಷ್ಠಿ 547, ಹೊಯ್ಸಳೆ 545, ಪಾಟೀಲ್ ಅಕ್ಷತಾ 535, ವಿಜ್ಞಾನ ವಿಭಾಗದ ಮಸೀಹಾ ಬಸ್ರಿನ್ 539, ಕೆ. ಗೌಸಿಯಾ 537, ಜಿ.ಸಿಂಚನ 530, ಶಿಕ್ಷಣ ವಿಭಾಗದ ಎಸ್‌. ದಿವ್ಯ 530, ಪಿ ಪಾರ್ವತಿ 529 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶಿಕ್ಷಣಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಪಾಸಾಗಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ನಿರಂತರ ಪ್ರಯತ್ನ ಹಾಗೂ ಎಲ್ಲ ಉಪನ್ಯಾಸಕರ ಸಂಘಟಿತ ಶ್ರಮದ ಪರಿಣಾಮವಾಗಿ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಎ. ಕೊಟ್ರಗೌಡ ಹರ್ಷ ವ್ಯಕ್ತಪಡಿಸಿದ್ದಾರೆ. ಉಪನ್ಯಾಸಕರಾದ ಬಿ.ಪ್ರಕಾಶ್, ದುಷ್ಯಂತ್, ನಟರಾಜ್ ಪಾಟೀಲ್, ಶಿವಕುಮಾರ್, ಆರತಿ ಸಂತಸ ವ್ಯಕ್ತಪಡಿಸಿದರು.  


ಸುದ್ದಿ ಓದಿ