ಬೆಳಗಾವಿ

ಶ್ರೀದೇವಿಯು ಶಿಷ್ಟರ ರಕ್ಷಣೆ ಮಾಡುವ ಮಹಾನ ಶಕ್ತಿ ದೇವತೆ

ಶ್ರೀದೇವಿಯು ಶಿಷ್ಟರ ರಕ್ಷಣೆ ಮಾಡುವ ಮಹಾನ ಶಕ್ತಿ ದೇವತೆ

ಲೋಕದರ್ಶನ ವರದಿ 

   ಬೆಟಗೇರಿ 15: ಶ್ರೀದೇವಿಯು ದುಷ್ಟ ಶಕ್ತಿಗಳ ಸಂಹಾರ ಮಾಡಿ, ಶಿಷ್ಟರ ರಕ್ಷಣೆ ಮೂಲಕ ಧರ್ಮದ ವಿಜಯವನ್ನು ದಯಪಾಲಿಸುತ್ತಾಳೆ. ಶ್ರೀದೇವಿಯು ಮಹಾನ ಶಕ್ತಿ ದೇವತೆಯಾಗಿದ್ದಾಳೆ ಎಂದು ಮುಗಳಿಹಾಳ ಸೋಮಾನಂದಭಾರತಿ ಮಹಾಸ್ವಾಮೀಜಿ ಹೇಳಿದರು. 

   ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿನಾಯಕ ಮಿತ್ರ ಮಂಡಳಿ ಸಹಯೋಗ ಮತ್ತು ಮಹಿಳಾ ನವರಾತ್ರಿ ಉತ್ಸವ ಸಮಿತಿ ಆಶ್ರಯದಲ್ಲಿ ಸ್ಥಳೀಯ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ಅ.14ರಂದು ನಡೆದ ನವರಾತ್ರಿ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು, ಜಗತ್ತಿನ ಕಲ್ಯಾಣಕ್ಕಾಗಿ ಆದಿಶಕ್ತಿ ವಿವಿಧ ಅವತಾರ ತಾಳುತ್ತಾಳೆ ಎಂದು ಶ್ರೀದೇವಿಯ ಮಹಾತ್ಮೆ (ಪುರಾಣ) ಕುರಿತು ಪ್ರವಚನ ನೀಡಿದರು.

   ನವರಾತ್ರಿ ಪ್ರಯುಕ್ತ 4ನೇ ದಿನ ಮುಗಳಿಹಾಳ ಸೋಮಾನಂದಭಾರತಿ ಮಹಾಸ್ವಾಮೀಜಿ ಅವರು ಶ್ರೀದೇವಿಯ ಪುರಾಣದಲ್ಲಿ ಬರುವ ರಾಕ್ಷಸರ ಸಂಹಾರ ಕುರಿತು ಪ್ರವಚನ ಮಾಡಿದರು. ಮುಗಳಿಹಾಳದ ಕುಮಾರಿ ದಾನಮ್ಮ ಅವರು ಶ್ರೀದೇವಿ ಪಾರಾಯಣ ವಾಚನ ಮಾಡಿದರು. ಹೆಣ್ಣು ಮಕ್ಕಳಿಂದ ಕೋಲಾಟ, ನೃತ್ಯಗಳು ಹಾಗು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 


ಸುದ್ದಿ ಓದಿ