ಕುಷ್ಟಗಿ

ಮಧ್ಯಂತರ ತಕರಾರು ಅರ್ಜಿ ಹೈಕೋರ್ಟ್‌ ವಜಾ: ಪತ್ರಕರ್ತರು ಸಂಭ್ರಮಾಚರಣೆ

ಮಧ್ಯಂತರ ತಕರಾರು ಅರ್ಜಿ ಹೈಕೋರ್ಟ್‌ ವಜಾ: ಪತ್ರಕರ್ತರು ಸಂಭ್ರಮಾಚರಣೆ

ಲೋಕದರ್ಶನ ವರದಿ  

ಕುಷ್ಟಗಿ 11: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆ ಬಗ್ಗೆ ಸಲ್ಲಿಸಿದ್ದ ಮಧ್ಯಂತರ ತಕರಾರು ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ, ನಿಯಮಾವಳಿ ಪ್ರಕಾರ ನ್ಯಾಯಸಮ್ಮತವಾಗಿ ಚುನಾವಣೆ ನಡೆದಿದೆ ಎನ್ನುವುದನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದರು.  

ಇದೇ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸಾಧಿಕ್ ಅಲಿ, ಜಿಲ್ಲಾಧ್ಯಕ್ಷರಾದ ಬಸವರಾಜ್ ಗೂಡ್ಲಾನೂರು, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್‌. ವೈ ,ಖಜಾಂಚಿಯಾಗಿ ರಾಜು.ಬಿ.ಆರ್ ಅವರನ್ನು ಪತ್ರಕರ್ತರು ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಕೆಲ ಪತ್ರಕರ್ತರು ತಮ್ಮ ಅಭಿಪ್ರಾಯ ಹಂಚಿಕೊಂಡರು.  

ಈ ಸಂದರ್ಭದಲ್ಲಿ ಪತ್ರಕರ್ತರಾದ ಬಸವರಾಜ ಪಲ್ಲೇದ ಮುಖೇಶ್ ನಿಲೋಗಲ್, ಅನಿಲ ಎಸ್  ಅಲಮೇಲ, ಸಂಗಮೇಶ್ ಸಿಂಗಾಡಿ, ರವಿಂದ್ರ ಬಾಕಳೆ,  ಸಂಗಮೇಶ ಲೂತಿಮಠ, ಭೀಮಣ್ಣ, ಅನಿಲ ಕಮ್ಮಾರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹೈಕೋರ್ಟ್‌ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಿಸಿದರು. 


ಸುದ್ದಿ ಓದಿ