ರಾಣೆಬೆನ್ನೂರ

ರೋಟರಿ ಸಂಸ್ಥೆಯಿಂದ ಹೆಚ್‌.ಆರ್‌. ಶಿವಕುಮಾರಗೆ ಸನ್ಮಾನ

ರೋಟರಿ ಸಂಸ್ಥೆಯಿಂದ ಹೆಚ್‌.ಆರ್‌. ಶಿವಕುಮಾರಗೆ ಸನ್ಮಾನ

ಲೋಕದರ್ಶನ ವರದಿ 


ರಾಣೇಬೆನ್ನೂರ 10: ಇಲ್ಲಿನ ಮಾರುತಿ ನಗರದ ಸೇವಾ ಅಂದರ ಸಂಸ್ಥೆಗೆ ಭೇಟಿ ನೀಡಿದ ರೋಟರಿ ಸಂಸ್ಥೆಯ ಮುಖಂಡರು ವಿಶೇಷ ಮಕ್ಕಳ ಸೇವಾ ಸಾಧನೆಗಾಗಿ  ಜಿಲ್ಲಾಡಳಿತದಿಂದ ಸಾಧಕರ ಗೌರವ ಸನ್ಮಾನ ಸ್ವೀಕರಿಸಿದ ಸಂಸ್ಥೆಯ ಅಧ್ಯಕ್ಷ ಹೆಚ್‌.ಆರ್‌.ಶಿವಕುಮಾರ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿ ಸನ್ಮಾನಿಸಿದರು. 

ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ಎಲ್‌.ಕೆ. ಚಳಗೇರಿ, ಕಾರ್ಯದರ್ಶಿ ಸಂಜೀವ ಶಿರಹಟ್ಟಿ, ವಾಯುವ್ಯ ಕ.ರಾ.ರ.ಸಾರಿಗೆ ನಿಗಮದ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಡಾ. ಎಂ.ಎಂ. ಅನಂತ ರೆಡ್ಡಿ,  ರೇಣುಕಾ ಶಿವಕುಮಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ