ಗುರುದೇವಿ ಹಳ್ಳೂರ ಅವರಿಗೆ ಪಿಎಚ್‌ಡಿ ಪದವಿ
ಲೋಕದರ್ಶನ ವರದಿ
ವಿಜಯಪುರ 31 : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಗುರುದೇವಿ ಹಳ್ಳೂರ ಅವರು ಸಲ್ಲಿಸಿದ್ದ “ಎ ಸ್ಟಡಿ ಆರ್ಫ ಲರ್ನಿಂಗ್ ಟಿಚಿಂಗ್ ಆ್ಯಂಡ್ ಥಿಂಕಿಂಗ್ ಸ್ಟೈಲ್ಸ್ ಆಫ್ ಪ್ರಾಸ್ಪೆಕ್ಟಿವ್ ಟೀಚರ‌್ಸ ಇನ್ ರಿಲೇಶನ್ ಟು ದೇರ್ ಟೀಚಿಂಗ್ ಕಾಂಪೀಟನ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಗುರುದೇವಿ ಹಳ್ಳೂರ ಅವರು ಶಿಕ್ಷಣ ವಿಭಾಗದ ಪ್ರೊ.ಬಿ.ಎಲ್. ಲಕ್ಕಣ್ಣವರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಗುರುದೇವಿ ಹಳ್ಳೂರ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.