ಶಿಗ್ಗಾವ್

ನಟರಾಜ ನೃತ್ಯ ಶಾಲೆಯ ಮಕ್ಕಳಿಂದ ಗುರು ವಂದನಾ ಕಾರ್ಯಕ್ರಮ

ನಟರಾಜ ನೃತ್ಯ ಶಾಲೆಯ ಮಕ್ಕಳಿಂದ ಗುರು ವಂದನಾ ಕಾರ್ಯಕ್ರಮ

ಶಿಗ್ಗಾವಿ 10:  ಪಟ್ಟಣದ ಜಯನಗರ ಗಣಪತಿ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ನಟರಾಜ ನೃತ್ಯ ಶಾಲೆಯ ಮಕ್ಕಳಿಂದ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಮಕ್ಕಳಿಗೆ ನೃತ್ಯಗುರು ಸಾಯಿಬಾಬಾ ಕಾಮನಹಳ್ಳಿ ಅವರು ಭರತ ನಾಠ್ಯಕಲಿಕೆಯಿಂದಾಗುವ ಪ್ರಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಐಶ್ವರ್ಯ ಬಾರ್ಕಿ ನೃತ್ಯಕಲಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದರು. ಕೊನೆಯಲ್ಲಿ ಗುರುವಂದನಾ ಕಾರ್ಯಕ್ರಮದ ಬಗ್ಗೆ ಚಂದ್ರಶೇಖರ ಪಾಟೀಲ ಹಿತನುಡಿ ಹೇಳಿದರು. ವಿದ್ಯಾರ್ಥಿ ಅನ್ವಿತಾ ಪಾಟೀಲ ಪ್ರಾರ್ಥನೆ ಮಾಡಿದರೆ, ಶಾಲಿನಿ ಕಾಮನಹಳ್ಳಿ ಸ್ವಾಗತ ನೃತ್ಯ ಮಾಡಿದಳು.ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ