ರಾಣೆಬೆನ್ನೂರ

ಮೌನೇಶ್ವರ ಗುರೂಜಿಯವರಿಗೆ ಶಿಷ್ಯವೃಂದ ಗುರುವಂದನೆ

ಮೌನೇಶ್ವರ ಗುರೂಜಿಯವರಿಗೆ ಶಿಷ್ಯವೃಂದ ಗುರುವಂದನೆ
ಇಲ್ಲಿನ ವಿಶ್ವವಿಭು ಧ್ಯಾನಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮೌನೇಶ

ರಾಣಿಬೆನ್ನೂರ 27:  ಗುರು ಪೂರ್ಣಿಮೆ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಪ್ರಭಾವ ಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಸಂಸ್ಕೃತ ಭಾಷೆಯಲ್ಲಿ ಗು ಎಂದರೆ ಅಂಧಕಾರ ಅಥವಾ ಅಜ್ಞಾನ, ರು ಎಂದರೆ ಅಂಧಕಾರ ದೂರ ಮಾಡುವುದು ಎಂದರ್ಥವಾಗಿದೆ ಎಂದು ಸ್ಥಳೀಯ ವಿಶ್ವವಿಭು ಧ್ಯಾನಪೀಠದ ಆಚಾರ್ಯ ಮೌನೇಶ್ವರ ಗುರೂಜಿ ಹೇಳಿದರು.  

ಇಲ್ಲಿನ ಉಮಾಶಂಕರ ನಗರದಲ್ಲಿರುವ ವಿಶ್ವವಿಭು ಧ್ಯಾನಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಏರಿ​‍್ಡಸಿದ್ದ ಹೋಮ ಹವನ ಹಾಗೂ ಗುರುಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿಯೂ ಸರ್ವರು ಗುರು ನಮನ ಸಲ್ಲಿಸುತ್ತಾರೆ ಎಂದು ನುಡಿದರು.  

ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದಲ್ಲೇ ಬ್ರಹ್ಮಸ್ರತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥವಾಗಿ ಈ ದಿನದಂದು ಬ್ರಹ್ಮಸ್ರತ್ರಗಳ ಪಠಣ ಮಾಡಲಾಗುತ್ತದೆ. ವೇದವ್ಯಾಸರನ್ನು ಪರಮ ಗುರುಗಳೆಂದು ಗೌರವಿಸಲಾಗುತ್ತದೆ ಅವರ ಸ್ಮರಣೆಯೇ ಗುರುಪೂರ್ಣಿಮೆ ಎಂದರು.  

ಗುರುಗಳು ಪ್ರತಿಯೊಬ್ಬ ಶಿಷ್ಯರನ್ನು ಅಜ್ಞಾನದಿಂದ ಸುಜ್ಞಾನದಡೆಗೆ ಸಾಗಿಸುವವರು. ಅಂತವರ ಮಾರ್ಗದರ್ಶನದಲ್ಲಿ ನಡೆಯುವವರು ಮಾತ್ರ ಸಾಧಕರಾಗಬಲ್ಲರು. ಅವರಿಂದ ಮಾತ್ರ ಸಮಾಜ ಸುಖವಾಗಿರಲು ಸಾಧ್ಯ, ಗುರು ಮಾರ್ಗವೇ ಮೋಕ್ಷಕ್ಕೆ ದಾರಿ. ಅವರ ಸ್ಮರಣೆ ಮಾಡುವುದೆ ನಮ್ಮ ಪುಣ್ಯ ಎಂದು ಗುರೂಜೀ ನುಡಿದರು.  

ಲಕ್ಷ್ಮೀದೇವಿ ಎಂ, ಡಾ. ವಿಧ್ಯಾ ವಾಸುದೇವಮೂರ್ತಿ ಡಾ. ನಳಿನಾ ಎಸ್, ಲಕ್ಷ್ಮೀದೇವಿ ಎಚ್, ರೋಹಿಣಿ ಆರ್, ಗೀತಾ ಪಿ, ಸುನಂದ ಜಿ, ಸಿಂಚನ ಬಿ, ಪ್ರತೀಕ್ಷಾ ಎಸ್‌.ಬಿ, ವಿಜಯಲಕ್ಷ್ಮೀ ಎಸ್‌.ಬಿ, ಜೀಯಾ, ನಿತ್ಯಶ್ರೀ ಎ.ಡಿ, ಗೌರಿ ಕೆ.ಕೆ, ವಿಜಯ ಜಿ.ಜೆ, ಸುಹಾಸ ಎ.ಡಿ, ವೆಂಕಟೇಶ ಜಿ.ಕೆ, ಶ್ಯಾಮರಾವ ನಿಂಬರಗಿ, ಎಂ.ಎನ್‌.ಕಮ್ಮಾರ, ಎಂ.ಟಿ.ಬಡಿಗೇರ, ಪ್ರಕಾಶ ಕಮ್ಮಾರ, ಜೀಯಾನ್, ಖಂಡೇಶ ಬಿ, ವೃಷಭೇಂದ್ರ ಎಚ್ ಸೇರಿದಂತೆ ಮತ್ತಿತರರು ಇದ್ದರು.  

ಸುದ್ದಿ ಓದಿ