ರಾಷ್ಟ್ರೀಯ

ಗುರು ತೇಗ್ ಬಹದ್ದೂರ್ ಹುತಾತ್ಮ ದಿನ: ರಾಷ್ಟ್ರಪತಿಯವರಿಂದ ಗೌರವ ನಮನ

ಗುರು ತೇಗ್ ಬಹದ್ದೂರ್ ಹುತಾತ್ಮ ದಿನ: ರಾಷ್ಟ್ರಪತಿಯವರಿಂದ ಗೌರವ ನಮನ

ನವದೆಹಲಿ, ನ 24: ಸಿಖ್ಖರ 9ನೇ ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ದೇಶಾದ್ಯಂತ ಇಂದು ಆಚರಿಸಲಾಗುತ್ತಿದೆ.

 

1675ರಲ್ಲಲಿ ಜನಿಸಿದ ಗುರು ತೇಗ್ ಬಹದ್ದೂರ್ ಅವರು  ಧರ್ಮ, ಮಾನವೀಯ ಮೌಲ್ಯಗಳು, ಆದರ್ಶಗಳು ಮತ್ತು ಸಿದ್ಧಾಂತಗಳನ್ನು ಕಾಪಾಡಲು ತಮ್ಮ ಜೀವನವನ್ನು ತ್ಯಾಗಮಾಡಿದ್ದರು.

ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಶಹೀದ್ ದಿನವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.

 

ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನದ ಅಂಗವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

‘ಸತ್ಯ, ನಂಬಿಕೆ ಮತ್ತು ಜನರ ಹಕ್ಕುಗಳನ್ನು ಕಾಪಾಡಲು ಗುರು ತೇಗ್ ಬಹದ್ದೂರ್ ಅವರು ಮಹಾ ತ್ಯಾಗ ಮಾಡಿದ್ದಾರೆ. ಮಾನವೀಯತೆಗೆ ಒಟ್ಟಾಗಿ ನಿಜವಾದ ಸೇವೆ ಸಲ್ಲಿಸಲು ನಮ್ಮೆಲ್ಲರಿಗೂ ಅವರು ಸ್ಫೂರ್ತಿಯಾಗಿದ್ದಾರೆ.ಅವರ ಬೋಧನೆಗಳು ಮತ್ತು ಕಾರ್ಯಗಳು ನಮ್ಮೆಲ್ಲರ ನಡುವೆ ಪ್ರೀತಿ ಮತ್ತು ದೇಶಭಕ್ತಿಯ ಸ್ಫೂರ್ತಿ ತುಂಬುತ್ತವೆ’ ಎಂದು ರಾಷ್ಟ್ರಪತಿಯರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ