ಗುರು ಪೂಜಾ ಉತ್ಸವ ಕಾರ್ಯಕ್ರಮ
ಶಿಗ್ಗಾವಿ 03: ಗುರುವಿನ ಅಡಿಯಲ್ಲಿ ನಡೆಸುವ ಶಾಖೆಯೇ ಅದುವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆ ಎಂದು ವಕ್ತಾರ ನಿಂಗಪ್ಪ ಮಡಿವಾಳರ ಹೇಳಿದರು.
ಪಟ್ಟಣದ ವಿಠ್ಠಲ ಹರಿಮಂದಿರದಲ್ಲಿ ನಡೆದ ಗುರು ಪೂಜಾ ಉತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದಅವರು ಸ್ವಯಂ ಸೇವಕರು ತಮ್ಮನ್ನು ತಾವು ದೇಶದ ಏಕತೆಗೆ, ಭದ್ರತೆಗೆ, ಸಂಘಟನೆಗಾಗಿ ಬಹಳ ಶ್ರಮ ಪಟ್ಟು ಸಮಾಜದ ಒಳಿತಿಗಾಗಿ ತಮ್ಮನ್ನುತಾವೇ ಸಮರ್ಿಸಿಕೊಂಡಾಗ ಮಾತ್ರ ನಮ್ಮಎಲ್ಲ ಸಂಕಲ್ಪಗಳು ಈಡೇರುತ್ತವೆ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಅನಿರ್ವಾಯತೆ ಎದುರಾಗುತ್ತದೆ ಎಂದರು.
ಸಾನಿಧ್ಯ ವಹಿಸಿ ಸಂಗನಬಸವ ಶ್ರೀಗಳು ಮಾತನಾಡಿ ದೇಶದಲ್ಲಿ ಇನ್ನೂ ರಾಷ್ಟ್ರಾಭಿಮಾನ ಮತ್ತು ದೇಶಾಭಿಮಾನ ಉಳಿದಿದ್ದರೆ ಅದಕ್ಕೆ ಆರ್.ಎಸ್.ಎಸ್. ಸಂಘಟನೆ ಕಾರಣ ಹಾಗೂ ಇಂದಿನ ದಿನಗಳಲ್ಲಿ ಜಾತಿಗೊಂದು ಸಂಘಟನೆ ಇದ್ದರು ಸಹಿತದೇಶಕ್ಕಾಗಿ ಮತ್ತುದೇಶದ ಭದ್ರತೆಗೋಸ್ಕರ ಯಾವ ಸಂಘಟನೆ ಕೆಲಸ ಮಾಡಲ್ಲ ಆದರೆ ಆರ್.ಎಸ್.ಎಸ್. ಸಂಘಟನೆ ಮಾತ್ರ ತುಂಬಾ ಅಚ್ಚು ಕಟ್ಟಾಗಿ ಕೆಲಸ ಕಾರ್ಯ ನಿರ್ವಹಿಸುತ್ತದೆ ಹಾಗೂ ಇಂದಿನ ಮಕ್ಕಳಿಗೆ ಈಗಿನಿಂದಲೇ ದೇಶಾಭಿಮಾನ ಬೆಳೆಸಲು ತಂದೆ ತಾಯಿಗಳು ಪ್ರೇರಣೆಯನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಯಂ ಸೇವಕರು ಮತ್ತು ಸಜ್ಜನ ಬಂಧುಗಳು ಉಪಸ್ಥಿತರಿದ್ದರು.