ಜಮಖಂಡಿ

ಗುಜರಾತ್ ಸಾರ್ವತ್ರಿಕ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಗುಜರಾತ್ ಸಾರ್ವತ್ರಿಕ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ನಗರದ ಹನುಮಾನ ಚೌಕದಲ್ಲಿ ಬಿಜೆಪಿ ಕಾರ್ಯಕರ್ತರು ಗುಜರಾತ್ ಗೆಲುವಿನ ವಿಜಯೋತ್ಸವ ಆಚರಿಸಿದರು

ಲೋಕದರ್ಶನ ವರದಿ,

ಜಮಖಂಡಿ 09:ಗುಜರಾತ್ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು. ಗುಜರಾತ ರಾಜ್ಯದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ  ಗೆಲುವು ಸಾದಿಸಿದ್ದಕ್ಕಾಗಿ ಕಾರ್ಯಕರ್ತರು ನಗರದ ಹನುಮಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ.ಉಪಾಧ್ಯೆ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ  ಶಂಕರ ಕಾಳೆ, ನಗರಸಭೆ ಸದಸ್ಯ ಗುರುಪಾದ ಮೆಂಡಿಗೇರಿ, ಕುಶಾಲ ವಾಗಮೋರೆ, ಪ್ರಶಾಂತ ಶಂಕ್ರಪ್ಪಗೋಳ, ರಾಜು ಚಿಕನಾಳ, ಬಸವರಾಜ ದೇವರವರ, ವಿನಾಯಕ ಗವಳಿ, ನಗರ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಬಸವ ರಾಜ ಕಲೂತಿ, ಬಸವರಾಜ ಬಿರಾದಾರ, ಡಾ.ರಾಕೇಶ ಲಾಡ, ಪ್ರಶಾಂತ ಗಾಯಕವಾಡ, ಶ್ರೀಶೈಲ ಗಡಾದ, ಶ್ಯಾಮ ಗಣಾಚಾರಿ, ರಮೇಶ ಆಲಬಾಳ, ಸಂತೋಷ ಮಾನೆ, ಶಿವು ನಾಯಕ, ವಿರೇಂದ್ರ ಕಲೂತಿ, ಅನೀಲ ಬಾಗಿಮನಿ, ಸಿದ್ದು ನ್ಯಾಮಗೌಡ, ಅಣ್ಣಪ್ಪ ಚಿಕ್ಕಲಗಾರ, ಸಚೀನ ಅಸುಗಡೆ, ರಾಯಬಾ ಜಾಧವ, ದೀಪಕ ಕದಂ, ಜ್ಯೋತಿಬಾ ಕಬೂಲೆ, ಸಚೀನ ಪಟ್ಟಣಶಟ್ಟಿ, ಶ್ರೀಧರ ಕಂಬಿ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ