ನಾಳೆ ದೇಶಾದ್ಯಂತ ನೀಟ್ ಪರೀಕ್ಷೆ; ಎನ್ ಟಿಎಯಿಂದ ಮಾರ್ಗಸೂಚಿ ಬಿಡುಗಡೆ
ನವದೆಹಲಿ, ಸೆಪ್ಟೆಂಬರ್ 12: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ನಾಳೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಡ್ರೆಸ್ ಕೋಡ್ ಜಾರಿಗೊಳಿಸಿದೆ.
ಈ ತಿಂಗಳ 13 ರಂದು ದೇಶಾದ್ಯಂತ ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಎನ್‌ಟಿಎ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಸಾಮಾನ್ಯ ವಸ್ತ್ರಗಳನ್ನು ಮಾತ್ರ ಧರಿಸಬೇಕು ಚಪ್ಪಲಿ ಹಾಗೂ ಸ್ಯಾಂಡಲ್ಸ್ ಮಾತ್ರ ಧರಿಸಬೇಕು, ಬುರ್ಖಾದಂತಹ ವಸ್ತ್ರಗಳನ್ನು ಧರಿಸುವಂತಿಲ್ಲ. ನಿಗದಿತ ಸಮಯಕ್ಕಿಂತ ಮೊದಲು ಪರೀಕ್ಷಾ ಹಾಲ್‌ಗೆ ಬರಬೇಕು. ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷಾ ಸಭಾಂಗಣಕ್ಕೆ ಅನುಮತಿಸಲಾಗುತ್ತದೆ. ಪ್ರವೇಶ ಪತ್ರದ ಜೊತೆಗೆ ಮಾನ್ಯತೆ ಪಡೆದ ಪುರಾವೆಯನ್ನು ಹಾಜರುಪಡಿಸಬೇಕು. ಒಂದೂವರೆ ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು ಎಂದು ಸೂಚಿಸಿದೆ.