ರಾಣೆಬೆನ್ನೂರ

ಸರ್ವಜ್ಞ ತ್ರಿಪದಿ ವಚನಗಳಿಂದ ಮಾರ್ಗದರ್ಶನ : ಕುಂಬಾರ

ಸರ್ವಜ್ಞ  ತ್ರಿಪದಿ ವಚನಗಳಿಂದ ಮಾರ್ಗದರ್ಶನ : ಕುಂಬಾರ


ಲೋಕದರ್ಶನ ವರದಿ 

ರಾಣಿಬೆನ್ನೂರ 25:  ಸರ್ವಜ್ಞ ಶಿವಭಕ್ತನಾಗಿದ್ದು ಶಿವಧ್ಯಾನ ಮಾಡಿ ಶಿವಯೋಗಿ ಎನಿಸಿಕೊಂಡವರು. ಅವರು ಅಪಾರವಾದ ಲೋಕಾನುಭವ, ಉದಾರ ಭಾವನೆ, ಅಹಿಂಸೆ, ಸತ್ಯ, ದಯೆ, ಉಪಕಾರ ಭಾವನೆ ಹೊಂದಿದವರು, ಸ್ವತಃ ತಾವು ಸಾಧಕಾರಾಗಿದ್ದು ಜನರಿಗೆ ಸಾಧಕರಾಗಲು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಕುಂಬಾರ ಸಮಾಜದ ಮುಖಂಡ ಬಸವರಾಜ ಕುಂಬಾರ ಹೇಳಿದರು. 

     ಇಲ್ಲಿನ ಮಿನಿ ವಿಧಾನಸೌಧದ ಸಭಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುಂಬಾರ ಸಂಘದ ಆಶ್ರಯದಲ್ಲಿ ತ್ರಿಪದಿ ಕವಿ ಸರ್ವಜ್ಞ ಮೂರ್ತಿಗಳ ಜಯಂತಿಯಲ್ಲಿ ಅವರ ಭಾವ ಚಿತ್ರಕ್ಕೆ ಪುಷ​‍್ಾರೆ್ಪಣ ಸಲ್ಲಿಸಿ ಮಾತನಾಡಿದ ಅವರು, ಸರ್ವಜ್ಞ ಮೂರ್ತಿಗಳು ಸಮಾಜದಲ್ಲಿಯ ಅಂಕು ಡೊಂಕು ತಿದ್ದಲು ತ್ರಿಪದಿ ವಚನಗಳ ಮೂಲಕ ಸರ್ವರಿಗೂ ಮಾರ್ಗದರ್ಶನ ನೀಡಿದವರು ಎಂದರು. 

   ಇಂದಿನ ಯುವಕರು ಸರ್ವಜ್ಞನ ತ್ರಿಪದಿ ವಚನಗಳನ್ನು, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಬಾಳು ಹಸನವಾಗುವುದು, ನಮ್ಮ ಜಿಲ್ಲೆಯವರೇ ಆದ ಅವರಿಗೆ ಗೌರವ ನೀಡುವುದು ನಮ್ಮ ಧರ್ಮವಾಗಿದೆ ಎಂದರು.  

   ಉಪತಹಶೀಲ್ದಾರ ಶ್ಯಾಮ ಗೊರವರ, ಕೊಟ್ರೇಶ ಕೆಂಚಪ್ಪನವರ ಬಿದ್ದಾಡೆಪ್ಪ ಚಕ್ರಸಾಲಿ, ಷಣ್ಮುಖಪ್ಪ, ಕಪ್ಪತ್ತಪ್ಪ ಸಾಲಿಮನಿ, ಮಲ್ಲಿಕಾರ್ಜುನ ಕೆಂಚಪ್ಪನವರ, ಯವರಾ ಬಾರಾಟಕ್ಕೆ, ನಾಗರಾಜ ಕುಂಬಾರ  ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು. 


ಸುದ್ದಿ ಓದಿ