ತಾಳಿಕೋಟಿ

ಗೃಹಲಕ್ಷ್ಮೀ ನೋಂದಣಿಗೆ ಮುಗಿಬಿದ್ದ ಮಹಿಳೆಯರು

ಗೃಹಲಕ್ಷ್ಮೀ ನೋಂದಣಿಗೆ ಮುಗಿಬಿದ್ದ ಮಹಿಳೆಯರು

ತಾಳಿಕೋಟಿ 25: ಕಾಂಗ್ರೆಸ್ ಸರಕಾರ ಘೋಷಿಸಿದ 5 ಮಹತ್ಷಾಕಾಂಕ್ಷೆ ಯೋಜನೆಗಳಲ್ಲಿ ರಾಜ್ಯದ ಮಹಿಳೆಯರನ್ನು ಸಬಲೀಕರಿಸಲು ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ ನೋಂದಾವಣಿಗೆ ಮಹಿಳೆಯರು ಪಟ್ಟಣದ ವಿವಿಧ ನೋಂದಣಿ ಕೇಂದ್ರದ ಮುಂದೆ ಮುಗೀಬೀಳುತ್ತಿರುವುದು ಸಾಮಾನ್ಯವಾಗಿದೆ. 

ಪಟ್ಟಣದಲ್ಲಿ ಒಟ್ಟು ಎರಡು ಕಡೆಗಳಲ್ಲಿ ಈ ಯೋಜನೆಯ ನೊಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಕೆಲವು ಸೆಂಟರ​‍್ಸ‌ಗಳಲ್ಲಿಯೂ ನೊಂದಣಿ ಮಾಡಿಕೊಳ್ಳಲಾಗುತ್ತದೆ. ಎಲ್ಲ ಕಡೆಗಳಲ್ಲಿಯೂ ಮಹಿಳೆಯರು ನೋಂದಣಿಗೆ ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.  

ಕರ್ನಾಟಕ ಒನ್ ಕೇಂದ್ರ ಹಾಗೂ ಪುರಸಭೆ ಸ್ಥಾಪಿಸಿರುವ ಕೇಂದ್ರದಲ್ಲಿ ಸರ್ವರ ಸಮಸ್ಯೆ ತುಂಬಾನೆ ಇದ್ದರು ಕೂಡಾ ಮಹಿಳೆಯರು ಸರದಿ ಸಾಲಿನಲ್ಲಿ ಕುಳಿತು ಗೃಹಲಕ್ಷ್ಮೀ ಒಲಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರತಿ ಮಹಿಳೆಯ ಕೈಯಲ್ಲಿ ಆಧಾರ ಕಾರ್ಡ್‌, ರೇಶನ ಕಾರ್ಡ್‌ ಹಾಗೂ ಇತರೆ ದಾಖಲಾತಿಗಳು ಇದ್ದು ಯೋಜನೆಯ ಲಾಭ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ  

ಸರಕಾರ ನೋಂದಣಿ ಕಾರ್ಯ ಯಾವುದೇ ರೀತಿಯ ಗದ್ದಲಕ್ಕೆ ಅವಕಾಶ ಮಾಡಿಕೊಡಬಾರದೆಂಬ ಉದ್ದೇಶಕ್ಕಾಗಿಯೇ ಒಂದು ಪ್ರತ್ಯೇಕ ಮೊಬೈಲ್ ಸಂಖ್ಯೆ ಕೊಟ್ಟು ವಿಸ್‌ಎಂಎಸ್ ಮೂಲಕ ನೋಂದಣಿ ದಿನಾಂಕ ಹಾಗೂ ಸ್ಥಳದ ದೃಢೀಕರಣಕ್ಕೆ ಅವಕಾಶ ಮಾಡಿಕೊಟ್ಟಿತ್ತು ಆದರೆ ಸಾರ್ವಜನಿಕರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನೇರ ನೋಂದಣಿ ಮುಗೀಬೀಳುತ್ತಿರುವುದರಿಂದ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಇದು ಸರಕಾರದ ಒಂದು ಅತ್ಯುತ್ತಮ ಯೋಜನೆಯಾಗಿದ್ದು ಇದರ ಫಲಾನುಭವಿ ಕುಟುಂಬದ ಮುಖ್ಯಸ್ಥೆಯಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಸಂಯಮದಿಂದ ವರ್ತಿಸುವ ಅಗತ್ಯ ಇದೆ ನೊಂದಣಿಗೆ ಇನ್ನೂ ಸಾಕಷ್ಟು ಸಮಯವಿದೆ ಅವಸರ ಪಡುವ ಅಗತ್ಯವಿಲ್ಲ. 


ಸುದ್ದಿ ಓದಿ