ಕಥೆ ಮತ್ತು ವಿಶೇಷ ಲೇಖನಗಳು

ವಿಷಮತೆಗಳನ್ನು ದೂರಸರಿಸಿ ಒಗ್ಗಟ್ಟನ್ನು ಬೆಳೆಸಿ

ವಿಷಮತೆಗಳನ್ನು ದೂರಸರಿಸಿ ಒಗ್ಗಟ್ಟನ್ನು ಬೆಳೆಸಿ

-ಡಾ. ಹೇಮಾವತಿ ಸೊನ್ನೊಳ್ಳಿ , ಬೆಳಗಾವಿ 

ಸಂಜು ಹಾಗೂ ಮಂಜು ಇಬ್ಬರೂ ನೆರೆಹೊರೆಯವರಾಗಿದ್ದರು.  ಇಟ್ಟರ ಭಾಷೆ ಬೇರೆ ಬೇರೆಯಾಗಿತ್ತು ಭಾಷೆ  ಬೇರೆ ಬೇರೆ ಇರುವುದರಿಂದ ಒಬ್ಬರನ್ನು ಕಂಡರೆ ಇನ್ನೊಬ್ಬನಿಗೆ ಆಗುತ್ತಿರಲಿಲ್ಲ. ನನ್ನ ಭಾಷೆ ಶ್ರೇಷ್ಠ ನಿನ್ನ ಭಾಷೆ ಕನಿಷ್ಠ ಅನ್ನುತ್ತಾ ಯಾವತ್ತೂ ಪರಸ್ಪರ ಕಚ್ಚಾಡುತ್ತಾ ಇರುತ್ತಿದ್ದರು. ತಮ್ಮ ತಮ್ಮ ಮನೆಯವರಿಗೆ ಹಾಗೂ ಮಕ್ಕಳಿಗೆ ಭಾಷಾ ವಿಷಮತೆಯ ಬೀಜವನ್ನೇ ಬಿತ್ತುದ್ದರೂ. ಹೀಗಾಗಿ ಎರಡೂ ಕುಟುಂಬದವರು ಭಾಷಾ ಭಿನ್ನತೆ. ಎತ್ತಿ ಕಟ್ಟಿಕೊಂಡು ಹೊಂದಿಕೊಂಡುದಲ್ಲಿ ಬಾಳುತ್ತಲೇ ಇರಲಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದವರು ಸೇರಿದರೆ ಸಾಕು ಬೂದಿ ಮುಚ್ಚಿದ ಕೆಂಡದಂತೆ ಉರಿದೆ ಉರಿಯುತ್ತಿದ್ದರು.

ರೂಪೇಶ ಮತ್ತು  ರಂಜಿತ ವಿವಿಧ ಸಮಾಜಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮಾಜದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿ ಸಮಾಜದ ಅಭಿವೃದ್ಧಿಯ ಚಿಂತನೆ ಗೈಯುತ್ತಿದ್ದರು ಇಬ್ಬರು ಜಾತಿ ಬೇರೆ ಬೇರೆಯಾಗಿತ್ತು ನಮ್ಮ ಜಾತಿ ಇದು ನಿಮ್ಮ ಜಾತಿ ಅದು ಎಂದು ಯಾವಾಗಲೂ ವಿರೋದಾಭಾಸವನ್ನು ವ್ಯಕ್ತಪಡಿಸುತ್ತಿದ್ದರು. ಇಬ್ಬರಲ್ಲೂ ಇರುವ ಜಾತಿ ಭಿನ್ನತೆ ಮೇಲಿಂದ ಮೇಲೆ ಜಗಳಕ್ಕೆ ಕಾರಣವಾಗುತ್ತಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಜಾತಿ ವಿಷಯ ಕಟ್ಟಕೊಂಡು ಬಬ್ಬರಿಗೊಬ್ಬರು ಹಾವು ಮುಂಗಿಸಿಯಂತಾಡುತ್ತಾ ಜಗಳಕಾಯುತ್ತಿದ್ದರು. ಇನ್ನುಳಿದ ಜನರಲ್ಲಿಯೂ ಜಾತಿ ಭಿನ್ನತೆಯನ್ನು ಬೆಳೆಸಿ ಸಮಾಜವನ್ನು ಒಡೆದು ಆಳುವ ಕೆಲಸವನ್ನು ಮಾಡುತ್ತಿದ್ದರು.

ಅಬುಲ್ ಮತ್ತು ಅರುಣ ಒಂದೇ ಊರಿನಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಸಮಾಜದಲ್ಲಿ ಒಳ್ಳೆ ಹೆಸರನ್ನು ಗಳಿಸಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರು. ತಮ್ಮ ತಮ್ಮ ಧರ್ಮದ ಮೇಲೆ ಅವರಿಗೆ ಅಪಾರ ಅಭಿಮಾನ ಇಟ್ಟುಕೊಂಡ ಅವರು ಒಬ್ಬರಿಗೊಬ್ಬರು ಕಂಡರೆ ಬುಸುಗುಟ್ಟುತ್ತಿದ್ದರು. ತಮ್ಮ ತಮ್ಮ ಧಾಮರ್ಿಕ ಆಚರಣೆಗಳು ಇನ್ನು ಧರ್ಮದವರಿಗಿಂತೆ ಮಿಗಿಲಾದವುಗಳು ಎಂಬ ದುರಭಿಮಾನ ಅವರಿಬ್ಬರಲ್ಲಿ ಮನೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ತಮ್ಮ ತಮ್ಮ ಧಮರ್ಿಯರನ್ನು ಎತ್ತಿ ಕಟ್ಟಿ ಸಾಮಾಜಿಕ ಒಗ್ಗಟ್ಟಿಗೆ ಧರ್ಮ ವಿಷಯತೆಯ ಕಾರಣವನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಕಂಟಕಪ್ರಾಯರಾಗಿದ್ದರು. ಇದರಿಂದ ಜನರೆಲ್ಲ ಮತಾಂಧರಂತೆ ರೊಚ್ಚಿಗೆಯ ಹಿಂಸಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡು ಶಾಂತಿ ಹಾಗೂ ನೆಮ್ಮದಿಯನ್ನು ಕೆಡಿಸುತ್ತಿದ್ದರು.

ನೀರಜಾ ಹಾಗೂ ನಯನಾ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಸುತ್ತಿದ್ದರು. ನೀರಜಾ ಒಂದು ಸಣ್ಣ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಅವಳ ಮೇಲಿನ ಮೇಲಾಧಿಕಾರಿಯಾಗಿರುವ ನಯನಾ ನೀರಜಾಳ ಮೇಲೆ ತನ್ನ ಉನ್ನತ ಹುದ್ದೆಯ ದರ್ಪವನ್ನು ತೋರುತ್ತಿದ್ದಳು. ತನ್ನ ಕೈಕೆಳಗೆ ಕೆಲಸ ಮಾಡುವ ಅವಳನ್ನು ತುಂಬಾ ಕೀಳಾಗಿ ಕಾಣುತ್ತಿದ್ದಳು. ನಾಲ್ಕು ಜನರೆದುರು ಅವಳೇನಾದರೂ ಸಣ್ಣ ತಪ್ಪನ್ನು ಮಾಡಿದರೂ ಬಾಯಿಗೆ ಬಂದಂತೆ ಒದರಾಡಿ ಅನ್ನು ಅವಮಾನಗೊಳಿಸುತ್ತಿದ್ದಳು. ದಿನವೂ ಇದನ್ನು ಕೇಳಿ ನೀರಜಾಳ ಮನಸ್ಸಿಗೆ ತುಂಬಾ ವೇದನೆಯಾಗುತ್ತಿತ್ತು. ಆದರೆ ನಯನಾಳಿಗೆ ಅಧಿಕಾರದ ಮದವೇರಿ ಆನೆಯಂತೆ ಮೆರೆಯುತ್ತಿದ್ದಳು.

ದರ್ಪದ ದಬರ್ಾರಿನಲ್ಲಿ ಕಣ್ಣಿದ್ದೂ ಕುರುಡಳಂತೆ ವತರ್ಿಸುತ್ತಿದ್ದಳು. ಇವಳ ದರ್ಪದ ಕೆಂಗಣ್ಣಿಗೆ ಬಲಿಯಾಗಿ ನರಳಿದವರೆಷ್ಟೋ ಜನರಿದ್ದರು.

ಇದೆಕೇ ಹೀಗೆ ಅಂತಾ? ಭಾಷೆ ಬೇರೆ ಬೇರೆತಾದರೇನು. ಅದು ಮನಸ್ಸಿನ ಅಭಿಪ್ರಾಯಗಳನ್ನು ಹೊರಹಾಕುವ ಎಲ್ಲರ ಸಾಧನ. ಒಬ್ಬರನ್ನೊಬ್ಬರು ಅರಿತು ಬೆರೆತು ಬಾಳಲು ಭಾಷೆ ಯಾವುದಾದರೆಂದು ಜಾತಿ ಬೇರೆ ಬೇರೆಯಾದರೂ ಅದನ್ನೇ ಮುಂದಿಟ್ಟುಕೊಂಡು ಕಚ್ಚಾಡುತ್ತಾ ಬಾಳುವುದು ಸರಿಯಲ್ಲಾ. ಧಾಮರ್ಿಕ ಆಚರಣೆಗಳು ಸಾಮಾಜಿಕ ನೈತಿಕ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಧರ್ಮದ ಕಾರಣವನ್ನೇ ದೊಡ್ಡದು ಮಾಡಿ ಶಾಂತಿ ಹಾಗೂ ನೆಮ್ಮದಿಯ ಸಹಬಾಳ್ವೆಯನ್ನು ಕೆದಕಿ ಹಿಂಸೆ ನೋವನ್ನು ನೀಡುವುದು ಎಷ್ಟು ಸಮಂಜಸವಾದುದು. ಹುದ್ದೆಗಳಿರುವುದು ಸೇವೆಗೈಯ್ಯಲು ಹೊರತು ನಾ ಮೇಲು ನೀ ಕೀಳು ಎಂದು ತೋರ್ಪಡಿಸಿಕೊಳ್ಳುವುದಕ್ಕೆ ಅಲ್ಲ ತ್ಯಾಗ ಹಾಗೂ ಮೇಲೆಯ ಮನೋಭಾವನೆಯನ್ನು ಬೆಳೆಸಿಕೊಂಡು ನಾವೆಲ್ಲ ಒಂದಾಗಿ ಚೆಂದಾಗಿ ಬಾಳಬೇಕು. ಯಾವುದೇ ಬೇಧಬಾವ ಗೈಯದೇ ಬೇಧಗಳನ್ನೆಲ್ಲ ದೂರ ಸರಿಸಿ ಪ್ರೀತಿ, ಸಹಕಾರ, ತ್ಯಾಗ, ಉದಾರ ಭಾವನೆ, ವಿಷಮತಾ ಸಹಿಷ್ಟುತೆಯಂಥ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

'ಭಾಷೆ ಬಿನ್ನವಾದರೂ ಅರ್ಧ ಒಂದು, 

ಜಾತಿ ಹಲವಾದರೂ ನೀತಿ- ಒಂದು 

ಧರ್ಮ ಹಲವಾದರೂ ಧ್ಯೇಯ ಒಂದು

ಹುದ್ದೆ ಹಲವಾರು ಸೇವೆ ಒಂದು'

ಎಂಬಂತೆ- ನಾವೆಲ್ಲ ಬದುಕಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂಬುದೇ ನನ್ನ ಸದಿಚ್ಛೆ.

ಸುದ್ದಿ ಓದಿ