ನೀರು ನಿಂತು ಮೊಳಕೆ ಒಡೆಯುತ್ತಿರುವ ಶೇಂಗಾ, ಆತಂಕದಲ್ಲಿ ರೈತರು
ನಿರಂತರ ಮಳೆಗೆ ಶೇಂಗಾ ಬೆಳೆ ನಾಶ
ಮಾಂಜರಿ 24: ಪ್ರಸಕ್ತ ಸಾಲಿನಲ್ಲಿನ ಮುಂಗಾರು ಮಳೆಯ ಸಮರ್ಕ ಸುರಿದಿದ್ದರಿಂದ ಶೇಂಗಾಸೇರಿದಂತೆ ವಿವಿಧ ಬೆಳೆಗಳು ಚೆನ್ನಾಗಿ ಬೆಳೆದುನಿಂತಿದ್ದವು, ಬಂಪರ ಬೆಳೆಯ ನೀರೀಕ್ಷೆಯಲ್ಲಿಯೂ ಇದ್ದರು. ಆದರೆ ಅಬ್ಬರದಿಂದ ಸುರಿಯುತ್ತಿರುವ ಮಳೆಯಿಂದಾ ಹೊಲಗದ್ದೆಗಳಲ್ಲಿ ನೀರು ನಿಂತು ಕೊಳೆಯುವುದರ ಜೊತೆಗೆ ಬದುಕುಳಿದ ಶೇಂಗಾ ಮೊಳಕೆ ಒಡೆಯುತ್ತಿದ್ದು, ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ ಎಂಬ ಪರಿಸ್ಥಿತಿ ಶೇಂಗಾ ಉತ್ಪಾದಕರದ್ದಾಗಿದೆ. ಬಂದೆರಗಿದ ಪ್ರವಾಹದಿಂದಾಗಿ ಶೇಂಗಾ ಉತ್ಪಾದನೆ ಶೇ. 30 ರಷ್ಟು ಕುಸಿದಿದ್ದರಿಂದ ಇಂದು ಶೇಂಗಾ 55 ರಿಂದ 60 ರೂ ಕಿಲೋಮಾರಾಟ ವಾಗುತ್ತಿದ್ದರಿಂದ ರೈತರ ಮುಖದಲ್ಲಿ ಮಂದಹಾಸ್ ಮೂಡಿಸಿದೆ
ಗಡಿ ಭಾಗದ ಚಿಕ್ಕೋಡಿ ತಾಲೂಕಿನಲ್ಲಿ 5.390ಹೆಕ್ಟರ್ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ4920 ಹೆಕ್ಟರ್ ಶೇಂಗಾ ಬೆಳೆದಿದ್ದಾರೆ ಇದರಲ್ಲಿ ಶೇಕಡಾ 60 ರಷ್ಟು ಜನ ಶೇಂಗಾ ತಗೆದಿದ್ದಾರೆ. ಇನ್ನು ಶೇ. 3. 40 ರಷ್ಟು ತಗೆಯುವುದು ಬಾಕಿ ಉಳಿದಿದ್ದು, ಮಳೆ ಸುರಿಯುತ್ತಿರುವದರಿಂದ ತಗೆಯುವ ಕಾರ್ಯ ಸ್ಥಗಿತಗೊಂಡಿದೆ. ಹೊಲಗಳಲ್ಲಿ ನೀರು ನಿಂತು ಕೊಳೆತ " ನಿರತರಾಗಿದ್ದಾರೆ. ತಗೆಯುವಲ್ಲಿ
ಹೊಲಗದ್ದೆಗಳಲ್ಲಿ ಕೆಲವೊಂದು ಭಾಗದಲ್ಲಿ ನೀರು ನಿಂತಿದ್ದನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಹಾಗೂ ಮಡ್ಡಿ ಪ್ರದೇ ಪ್ರದೇಶದಲ್ಲಿನ ಶೇಂಗಾ ತೆಗೆಯಲು ಪರದಾಡುತ್ತಿದ್ದಾರೆಆದರೂ ಮೇಲಿಂದ ಮೇಲೆ ಸುರಿಯತ್ತಿರುವುದರಿಂದ ಮಳೆಯ ಭೀತಿ ಇನ್ನುವರೆಗೆ ರೈತರನ್ನು ಕಾಡುತ್ತಿದೆ
ಪ್ರಸಕ್ತ ಸಾಲಿನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 10.310 ಹೆಕ್ಟರ್ ಶೇಂಗಾ ಬೆಳೆದಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿನ ಅಬ್ಬರದ ಮಳೆ ಮತ್ತು ಪ್ರವಾಹದಿಂದಾಗಿ ಶೇ. 30 ರಷ್ಟು ನಾಶವಾಗಿದೆ. ಶೇಂಗಾ ಬೆಳೆ ಬಂದಿದೆ. ಆದರೆ ಇಳುವರಿ ಕಡೆಮೆಯಾಗಿದ್ದು. ಶೇಂಗಾ ತೆಗೆಯುವ ಸಂದರ್ಭದಲ್ಲಿ ಮಳೆ ಅಡ್ಡಿ ಮಾಡುತ್ತಿದೆ. ಇದರಿಂದ ರೈತರಲ್ಲಿ ಆತಂಕ ಹೆಚ್ಚಿಸಿದೆ.
ಗಡಿಭಾಗದಲ್ಲಿ ಕಬ್ಬು ಮತ್ತು ಸೋಯಾ ಎಂದು ರೈತರು ತಿಳಿಸಿದ್ದಾರೆ. ಬೆಳೆಯ ನಂತರ 3 ನೇ ಸ್ಥಾನದಲ್ಲಿ ಶೇಂಗಾ ಬೆಳೆ ಬೆಳೆಯುತ್ತಾರೆ. ಈ ಬೆಳೆಯು 90 ರಿಂದ 100 ದಿನಗಳಲ್ಲಿ ಬೆಳೆ ಬರುತ್ತದೆ. ಸಪ್ಟೆಂಬರತಿಂಗಳಲ್ಲಿ ರೈತರ ಕೈಯಲ್ಲಿ ದುಡ್ಡು ಬರುತ್ತದೆ.
ಈ ಬಾರಿ ಉತ್ಪಾದನೆ ಹೆಚ್ಚಿಗೆ ಆಗಬಹುದೆಂಬ ಆಸೆ ರೈತರಲ್ಲಿತ್ತು. ಆದರೆ ಮಳೆ ಮತ್ತು ಪ್ರವಾಹದಿಂದ ಶೇ. 30 ರಷ್ಟು ನಾಶವಾಗಿದೆ ಎಂದು ರೈತರು ತಿಳಿಸಿದ್ದಾರೆ ಮೋಡಕವಿದ ವಾತಾವರಣ, ಅಬ್ಬರದ ಮಳೆಯಿಂದಾಗಿ ಬೆಳೆದು ನಿಂತ ಬೆಳೆಗಳಿಗೆ ಮಳೆ ಅಡ್ಡಿ ಮಾಡುತ್ತಿದ್ದು, ಹೊಲದಲ್ಲಿಶೇಂಗಾ ನಿಗದಿಪಡಿಸಿದ ದಿನಕ್ಕಿಂತ ಹೆಚ್ಚುಕಾಲ ನಿಂತರೆ ಶೇಂಗಾ ಮೊಳಕೆ ಒಡೆದು ಬೆಳೆ
ನಾಶವಾಗುತ್ತದೆ. ಸರಿಯಾದ ವೇಳೆಗೆ ಶೇಂಗಾ ತೆಗೆದರೆ ಮಾತ್ರ ರೈತರಿಗೆ ಲಾಭವಾಗುತ್ತದೆ ಎಂದು ಉತ್ಪಾದಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಸಕ್ತಸಾಲಿನ ಮಳೆ, ಪ್ರವಾಹ ಮತ್ತು ಅತಿವೃಷ್ಟಿ ರೈತರನ್ನು ಒಂದಲ್ಲಾ ಕಾಡಿರುವುದು ಮಾತ್ರ ಸತ್ಯ! ಒಂದು ರೀತಿ