ಶಿರಗುಪ್ಪಿಯಲ್ಲಿ ಬೌಧ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಶಿರಗುಪ್ಪಿಯಲ್ಲಿ ಬೌಧ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಕಾಗವಾಡ 14 ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು 30 ಲಕ್ಷ ಅನುದಾನದ ನೂತನ ಬೌದ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಮಂಗಳವಾರ ದಿ. 14 ರಂದು ಗಣ್ಯರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಜು ಕಾಂಬಳೆ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬೌದ್ಧ ಧರ್ಮ ಸ್ವೀಕರಿಸಿದ ಇಂದಿನ ದಿನ ಅಂಬೇಡ್ಕರ ಅನುಯಾಯಿಗಳಿಗೆ ಮಹತ್ವದ ದಿನವಾಗಿದ್ದು, ಬೌದ್ಧ ಧರ್ಮದ ಪ್ರಚಾರ ಮತ್ತು ಬೌದ್ಧ ಉಪಾಸನಕ್ಕಾಗಿ ಬೌದ್ಧ ವಿಹಾರಗಳ ಅವಶ್ಯಕತೆ ಇರುತ್ತದೆ. ಈಗಿನ ರಾಜ್ಯ ಸರ್ಕಾರ ಮತ್ತು ಮಾಜಿ ಶಾಸಕರು, ಹಾಗೂ ಮಾಜಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಮತ್ತು ಹಾಲಿ ಶಾಸಕರಾದ ರಾಜು ಕಾಗೆ ಅವರ ಸಹಕಾರದೊಂದಿಗೆ ಶಿರಗುಪ್ಪಿಯಲ್ಲಿ ರಾಜ್ಯದಲ್ಲಿಯೇ ್ರ್ರಥಮ ಬಾರಿಗೆ ಅದ್ಭುತವಾದ ಬೌದ್ಧ ವಿಹಾರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದರು.
ದಿವ್ಯ ಸಾನಿಧ್ಯವನ್ನು ಧಮ್ಮಪಾಲ ಭಂತೇಜಿ ವಹಿಸಿದ್ದರು. ಅತಿಥಿಗಳಾಗಿ ಪ್ರಾ. ಡಾ. ಎಸ್.ಪಿ. ತಳವಾರ, ಬಾಳಾಸಾಬ ಕಾಂಬಳೆ, ತುಕಾರಾಮ ಕಾಂಬಳೆ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಗದಾಳೆ, ಮುಖಂಡರಾದ ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಅಭಿಯಂತರ ಕಿರಣ ದಾಮನ್ನವರ, ರಾಜುಗೌಡಾ ಪಾಟೀಲ, ರಾಜೇಂದ್ರ ಚೌಗುಲೆ, ಶಿವಾನಂದ ನವಿನಾಳೆ, ಅಜೀತ ಪೂಜಾರಿ, ಸದಾಶಿವ ಪೂಜಾರಿ, ಇಕ್ಬಾಲ ಕನವಾಡೆ, ಮಸ್ತಾನ ಕನವಾಡೆ, ಸಂದೀಪ ಕೋಳಿ, ಕಮಲಾ ಜಂಗಟಾಳೆ, ಬೌದ್ಧ ಫೌಂಡೇಶನ್ ಅಧ್ಯಕ್ಷ ವಿದ್ಯಾಧರ ಮೌರ್ಯ, ಉಪಾಧ್ಯಕ್ಷೆ ಗೀತಾ ಕಾಂಬಳೆ, ರಮೇಶ ಕಾಂಬಳೆ, ಸಚೀನ ಕಾಂಬಳೆ, ಪ್ರೇಮಾ ಕಾಂಬಳೆ, ಶ್ರೀದೇವಿ ನಾಯಿಕ, ಶಿಲ್ಪಾ ಶಿರಗಾಂವೆ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಕಾಂಬಳೆ ಸೇರಿದಂತೆ ಬೌದ್ಧ ಸಮಾಜ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು.