ಶಿಗ್ಗಾವ್

ಕಿರಾಣಿ ವ್ಯಾಪಾರಸ್ಥರ ಸಂಘ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ

ಕಿರಾಣಿ ವ್ಯಾಪಾರಸ್ಥರ ಸಂಘ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 30:  ಬುಧವಾರ ಸಂತೆ ವ್ಯಾಪಾರದಂದು ಕಿರಾಣಿ ಪದಾರ್ಥಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ನಡೆಸುತ್ತಿದ್ದು, ತೂಕ ಮತ್ತು ಗುಣಮಟ್ಟದ ಪದಾರ್ಥ ವ್ಯಾಪಾರವಿರುವುದಿಲ್ಲ ವ್ಯವಹಾರ ಬಂದ ಮಾಡಬೇಕೆಂದು ಶಿಗ್ಗಾವಿ ನಗರ ಕಿರಾಣಿ ವ್ಯಾಪಾರಸ್ಥರ ಸಂಘ ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಅಪರ್ಿಸಿದರು.

ಸಂತೆದಿನ ಬಯಲು ಜಾಗೆಯಲ್ಲಿ ಹೊರತು ಪಡಿಸಿ, ವ್ಯಾಪಾರಸ್ಥರು ಸ್ವಚ್ಛತೆಯಿಲ್ಲದ ಪ್ರದೇಶದ ಭಾಗದಲ್ಲಿ ಮತ್ತು ಚರಂಡಿಗಳ ಪಕ್ಕದಲ್ಲಿಯೇ ತಿನ್ನುವ ಆಹಾರ ಮಾರಾಟ ಮಾಡುತ್ತಿದ್ದಾರೆ.  ತರಕಾರಿ ಕಾಯಿ ಪಲ್ಯ ಹೊರತುಪಡಿಸಿ ಇತರೇ ದಿನಸಿಗಳನ್ನು ಎಣ್ಣೆ, ಕಾಳು, ಆಹಾರ ಪದಾರ್ಥ ಬೀಧಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಕೊಳ್ಳುವ ಗ್ರಾಹಕರಿಗೆ ಗುಣಮಟ್ಟ ಹಾಗೂ ದರದಲ್ಲಿ ವ್ಯತ್ಯಾಸ ಮೋಸ ಕಂಡು ಬರುತ್ತಿದೆ. ಇದರಿಂದ ಕಿರಾಣಿ ವ್ಯವಹಾರಸ್ಥರು ಸಂಕಷ್ಟ ಎದುರಿಸಬೇಕಾಗಿದ್ದು, ಸಂತೆ ನಡೆಯುವ ಪ್ರದೇಶವನ್ನು ಪಟ್ಟಣದ ಮಾರ್ಕಿಟ್ ರಸ್ತೆ, ಹಳೆಪೇಠೇಯ ಸಂಪರ್ಕಿತ ರಸ್ತೆ, ಬಸ್ ನಿಲ್ದಾಣ ರಸ್ತೆ. ವಿಸ್ತರಿಸುವಂತೆ ತಮ್ಮ ಮನವಿಯಲ್ಲಿ ಕೋರಿಕೆ ಸಲ್ಲಿಸಿ. ಜೊತೆಗೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು, ಆಹಾರ ಗುಣಮಟ್ಟ ಸಂರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುವಂತೆ ಕೋರಿದ್ದಾರೆ.

ಶಿಗ್ಗಾವಿ ನಗರ ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲೋಹಿತ್ ಬುಳ್ಳಕ್ಕನವರ ನೇತ್ರತ್ವದಲ್ಲಿ ಮಂಜುನಾಥ ಅಕ್ಕಿ, ರಾಘವೇಂದ್ರ ದೇಶಪಾಂಡೆ, ಮಾದೇವಪ್ಪ ರಾಜು ಕುಲಕರ್ಣಿ  ಗಂಜೀಗಟ್ಟಿ, ಸಿದ್ದು ಅಕ್ಕಿ, ಮಂಜುನಾಥ ಗಂಜೀಗಟ್ಟಿ, ಅಬ್ದುಲ್ ರಜಾಕ್ ನೀರಮನಿ,ಬೆನಕಪ್ಪ ಯಲಿಗಾರ, ಕುಮಾರ ಬಳ್ಳಾರಿ. ತೋಟಯ್ಯಾ ಕುಂಬಾರಗೇರಿಮಠ, ಮಾಲತೇಶ ಮಲ್ಲಾಡದ,ಸೇರಿದಂತೆ ಹಲವರು ವ್ಯಾಪಾರಸ್ಥರು ಇದ್ದರು.

ಸುದ್ದಿ ಓದಿ