ಬಡಕುಟುಂಬಗಳಿಗೆ ರಮೇಶ್ ಕಾಳನ್ನವರ ದಿನಸಿ ಕಿಟ್ ವಿತರಣೆ
ಚಿಕ್ಕೋಡಿ 17: ಲಾಕಡೌನ್ದಿಂದ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಬಡ ಕುಟುಂಬಗಳಿಗೆ ಕೊರೊನಾ ವಾರಿಯರಸ್ ಮತ್ತು ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಆಡಳಿತದ 7 ನೇ ವರ್ಷದ ಯಶಸ್ವಿ ಪೂರೈಸಿದ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಸೇವಾ ಹೀ ಸಂಘಟನೆ ತತ್ವದಡಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕಾಳನ್ನವರ ಹಾಗೂ ಅವರ ಕುಟುಂಬದಿಂದ ಮತ್ತು ಅವರ ಗೆಳೆಯರ ಬಳಗದಿಂದ ಕಿರಣಿ ದಿನಸಿ ಕಿಟ್ ವಿತರಿಸಿದರು.
ನಾಗರಮುನ್ನೋಳಿ ಹಾಗೂ ಬೆಳಗಲಿ ಗ್ರಾಮದ ಅತ್ತಿ ಕಡು ಬಡತನದ ಕುಟುಂಬಗಳಿಗೆ ಯಾರು ಸದ್ಯ ಉದ್ಯೋಗವಿಲ್ಲದೆ ಪರದಾಡುವಂತ ಆಗಬಾರದು ಮತ್ತು ಹಸಿವಿನಿಂದ ಪರದಾಡುವಂತ ಆಗಬಾರದು ಎಂಬ ಪರಿಕಲ್ಪನೆಯಲ್ಲಿ ಸುಮಾರು 150 ಬಡಕುಟುಂಬಗಳಿಗೆ ಮತ್ತು ಆಶಾ ಕಾರ್ಯಕರ್ತರು ಹಾಗು ಪಂಚಾಯತಿ ಸಿಬ್ಬಂದಿಗಳಿಗೆ ಕಿರಾಣಿ ದಿನಸಿ ಕೀಟಗಳನ್ನು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿತರಿಸಿದರು. ಹಾಗೂ ಬಡಕುಟುಂಬಗಳಿಗೆ ಅವರವರ ಮನೆ ಬಾಗಿಲಿಗೆ ಬಿಜೆಪಿ ಕಾರ್ಯಕರ್ತರು ತಲುಪಿಸಿದರು.
ಎಂ.ಬಿ ಆಲೂರೆ. ಡಿ.ಆರ್ ಕೊಟ್ಟೆಪಗೋಳ. ಎಂ.ಎಸ್. ಈಟಿ. ಬಾಬು ಕಾಳನ್ನವರ. ಮಲ್ಲಪಾ ಟೊನಪೆ. ಕಲ್ಲಪ್ಪ ಪಚ್ಚಾಪುರೆ. ಅರುಣ್ ಮರ್ಯಾಯಿ. ಮಲ್ಲಿಕಾರ್ಜುನ್ ಈಟಿ. ಮಾಂತೇಶ್ ಪಟೇವಾಲಾ. ನಿಜಾಮ ಪೆಂಡಾರಿ. ಈರಣ್ಣ ಈಟಿ.ಸುದೀಪ್ ಬಿರನಗಡ್ಡಿ. ಲಾಡಜಿ ಮುಲ್ತಾನಿ ಮಹಾಂತೇಶ್ ಬೀರನಗಡ್ಡಿ. ಸಿದ್ದು ಈಟಿ ಮುಂತಾದವರು ಇದ್ದರು.