ಗೃಹಲಕ್ಷ್ಮಿ ಕಾರ್ಯಕ್ರಮ ತಾಯಂದರಿಗೆ ಸಿಹಿ ಅಂಚುವ ಮೂಲಕ ಹರ್ಷ ವ್ಯಕ್ತ
ಲೋಕದರ್ಶನ ವರದಿ
ಶಿಗ್ಗಾವಿ 31: ದೇಶದ ಇತಿಹಾಸ ಪುಟದಲ್ಲಿ ಸೇರಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಕಾರ್ಯಕ್ರಮ ಕೋಟ್ಯಂತರ ತಾಯಂದಿರ ಹರ್ಷ ಇಂದಿನ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ತಾಯಂದರಿಗೆ ಸಿಹಿ ಅಂಚುವ ಮೂಲಕ ಶಿಗ್ಗಾವ್ ತಾಲೂಕಕಾಂಗ್ರೆಸ್ ವಕ್ತಾರ ಮಂಜುನಾಥ ಮಣ್ಣಣ್ಣವರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜರುಗಿದ ಗ್ರಹಲಕ್ಷ್ಮೀ ಯೋಜನ ಅನುಷ್ಠಾನ ಕಾರ್ಯಕ್ರಮ ಸ್ಥಳೀಯ ಪುರಸಭೆ ಹೆಸ್ಕಾಂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತರ ಇಲಾಖೆ ಸಂಯೋಗದಲ್ಲಿಅತ್ಯಂತ ಯಶಸ್ವಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮಕ್ಕೆ ಆಗಮಿಸಿದ ತಾಯಂದಿರಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗುತಂದುಕೊಟ್ಟ ಮುಖಂಡರು ತದನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥದೇಶದಇತಿಹಾಸದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹಿಂದೆ ರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಕೆಲವು ಕಾರ್ಯಕ್ರಮಗಳನ್ನು ಜಾರಿತಂದಿತ್ತು ಇದೀಗ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯಕಾಂಗ್ರೆಸ್ ಸರ್ಕಾರ ಉಪಮುಖ್ಯಮಂತ್ರಿಡಿಕೆ ಶಿವಕುಮಾರ್ ಅವರ ನಿರಂತರ ಶ್ರಮದಿಂದ ದೇಶದ ಇತಿಹಾಸ ಪುಟ ಸೇರುವ ತಾಯಂದಿರಿಗಾಗಿ ಅರ್ಪಣೆ ಮಾಡಿ ಬೆರೆ ಏರಿಕೆ ಹಾಗೂ ಆರ್ಥಿಕ ಅಭಿವೃದ್ಧಿಕರಣಕ್ಕಾಗಿ ತಿಂಗಳಿಗೆ 2000 ಹಣ ನೀಡುವ ಮೂಲಕ ಗೃಹಲಕ್ಷ್ಮೀ ಕಾರ್ಯಕ್ರಮವನ್ನು ಇಡೀರಾಜ್ಯಾದ್ಯಂತ ಅನುಷ್ಠಾನಕ್ಕೆ ತಂದಿದ್ದು ಇಡಿ ದೇಶವೇ ಮೆಚ್ಚುವಂತ ಕೆಲಸವಾಗಿದೆ ಇಂತಹ ಯೋಜನೆ ಮತ್ತು ಕಾರ್ಯಕ್ರಮಗಳು ಕೇವಲ ಕಾಂಗ್ರೆಸ್ ಪಕ್ಷದಿಂದ ಸಾಧ್ಯಎಂಬುದನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಸಾಬೀತುಪಡಿಸಿದೆ ಗ್ರಹಲಕ್ಷ್ಮಿ, ಕಾರ್ಯಕ್ರಮ ಯಶಸ್ವಿಯನ್ನು ನೋಡಿ ಹತಾಶೆಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ಲಾಕ ಅಧ್ಯಕ್ಷ ಶಂಬುಲಿಂಗಪ್ಪ ಆಜೂರ, ಪಕ್ಷದ ಹಿರಿಯ ಮುಖಂಡ ರಶೀದ ಗೋಟಗೋಡಿ, ನಜೀರ್ ಅಹಮದ್ ಮಾಸನಕಟ್ಟಿ, ಮುನ್ನಡಾಣೆಬಾಗ್ ಚಂದ್ರು ಕೊಡ್ಲಿವಾಡ್ ನಿಸಾರ್ಅಹಮದ್ ತೂಕಲ್ಲಿ ಅನಿಲ ಬದ್ರಾಪುರ್ ಕಾಜಾ ಸವಣೂರು ಪ್ರವೀಣ ಧಾರವಾಡ ಇನ್ನು ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು