ವಿಜಯಪುರ

ಹಸಿರು ಕ್ರಾಂತಿ ಹರಿಕಾರ ಬಾಬೂಜಿಯವರ ತತ್ವಾದರ್ಶ ನಮಗೆಲ್ಲ ಮಾದರಿ: ತಹಶೀಲ್ದಾರ್ ಬಿರಾದಾರ

ಹಸಿರು ಕ್ರಾಂತಿ ಹರಿಕಾರ ಬಾಬೂಜಿಯವರ ತತ್ವಾದರ್ಶ ನಮಗೆಲ್ಲ ಮಾದರಿ: ತಹಶೀಲ್ದಾರ್ ಬಿರಾದಾರ

ದೇವರಹಿಪ್ಪರಗಿ  05: ದೇಶದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ತತ್ವಾದರ್ಶಗಳು ಇಂದಿಗೂ ನಮಗೆಲ್ಲ ಮಾದರಿಯಾಗಿವೆ ಎಂದು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ನಿಂಗಣ್ಣ ಬಿರಾದಾರ ಅಭಿಪ್ರಾಯಪಟ್ಟರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 119ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,“ಬಡತನದಲ್ಲಿ ಹುಟ್ಟಿದ ಜಗಜೀವನ ರಾಮ್ ಅವರು ತಮ್ಮ ಪ್ರತಿಭೆಯಿಂದ ಕೇಂದ್ರ ಸರ್ಕಾರದ ಉಪ ಪ್ರಧಾನಿಯಾಗಿ,ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿ ಬಡವರು, ಶೋಷಿತರು, ನಿರ್ಗತಿಕರ ಅಭಿವೃದ್ಧಿಗಾಗಿ ಕಾನೂನು ರೂಪಿಸಿ ಬಡವರ ಪಾಲಿಗೆ ದೇವರಾಗಿದ್ದರು.

ಬಾಬೂಜಿಯವರು ಕಂಡ “ಬಡತನ ಮುಕ್ತ ದೇಶದ ಕನಸ”ನ್ನು ನನಸು ಮಾಡಲು ಅವರಂತಹ ವ್ಯಕ್ತಿಗಳ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ತುಂಬಾ ಅವಶ್ಯಕತೆ ಇದೆ.ಕಾರ್ಯಕ್ರಮದ ಉಪನ್ಯಾಸವನ್ನು ನಿವೃತ್ತ ಪ್ರೌಢಶಾಲೆಯ ಶಿಕ್ಷಕರಾದ ಕೆ. ಎಸ್‌. ಹಿರೇಕುರುಬರ ಅವರು ಮಾತನಾಡಿ, ಬಾಬೂಜಿಯವರ ಬಾಲ್ಯ, ಸ್ವಾತಂತ್ರ್ಯ ಹೋರಾಟ, ದೇಶಕ್ಕೆ ನೀಡಿದ ಕೊಡುಗೆಯ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಸಿದ್ದು ಮೇಲಿನಮನಿ, ಎಸ್ಸಿ.ಎಸ್ಟಿ ನೌಕರರ ಸಂಘದ ಅಧ್ಯಕ್ಷ ಸದಾಶಿವ ಗುಡಿಮನಿ, ಶಸಾಪ ಅಧ್ಯಕ್ಷ ಎಸ್‌.ಎನ್‌. ಬಸವರಡ್ಡಿ, ಕೆಡಿಪಿ ಸದಸ್ಯರಾದ ಪ್ರಕಾಶ ಗುಡಿಮನಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಜಿ.ಪಿ. ಬಿರಾದಾರ, ಮುಖಂಡರುಗಳಾದ ರಾಘವೇಂದ್ರ ಗುಡಿಮನಿ, ರಾಹುಲ ದೊಡಮನಿ, ನಾಗೇಶ ವಗ್ಗರ, ಕಿರಣ ವಗ್ಗರ, ಪರಶುರಾಮ ಸನಾದಿ, ರಾಕೇಶ ದೊಡಮನಿ, ಭಿಮಾಶಂಕರ ದೊಡಮನಿ, ಪರಸು ವಗ್ಗರ, ಸಂತೋಷ ಮೇಲಿನಮನಿ, ಸಂದೀಪ ವಗ್ಗರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರು ಮತ್ತು ಸಿಬ್ಬಂದಿಗಳಾದ ಸರ್ವೇಶ ಆಲಮೇಲಕರ್, ಹಣಮಂತ ಲಾತೂರ, ಅನಿಲ ಮುಕಾಶಿ, ಇಸ್ಮಾಯಿಲ ಮುಂದೇವಾಲ, ಶ್ರೀನಿವಾಸ ಬಂಡಿವಡ್ಡರ, ಶ್ರೀಮತಿ ನತೀಶಾ ದಪೇದಾರ, ಕುಮಾರಿ ಪೂಜಾ ನಿಕ್ಕಂ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ