ರಾಣೆಬೆನ್ನೂರ

‘ವಿದ್ಯಾರ್ಥಿ ಜೀವನದಲ್ಲಿ ಸಮಯ ಪರಿಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು’

‘ವಿದ್ಯಾರ್ಥಿ ಜೀವನದಲ್ಲಿ ಸಮಯ ಪರಿಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು’

ಲೋಕದರ್ಶನ ವರದಿ 

ರಾಣಿಬೆನ್ನೂರ 14:  ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಸಮಯ ಪರಿಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು. ಆಗ ಮಾತ್ರ ಅಂದುಕೊಂಡ ಗುರಿಗಳನ್ನು ಮುಟ್ಟಲು ಸಾಧ್ಯ ಎಂದು ನಿವೃತ್ತ ಯೋಧ ವೆಂಕಟಗಿರಿ ರೆಡ್ಡಿ ಹೇಳಿದರು. 

   ಇಲ್ಲಿಯ ಮಾರುತಿ ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಜೆಸಿಐ ಘಟಕ ಹಾಗೂ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ದಿ. ದೊಡ್ಡನಾಗಪ್ಪ ಕಾಕಿ 36ನೇ ಪುಣ್ಯಸ್ಮರಣಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರಿ​‍್ಡಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ವಿಲಾಸಿ ಜೀವನ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯ ಕಡೆಗೆ ಆಕರ್ಷಿತರಾಗದೆ ಶಿಕ್ಷಣದ ನೈಜ ಆಶಯವನ್ನು ಈಡೇರಿಸುವತ್ತ ಮುಖ ಮಾಡಬೇಕು ಎಂದರು. 

   ವಿದ್ಯಾರ್ಥಿ ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳ ಜತೆಗೆ ಕ್ರಿಯಾಶೀಲರಾಗಿ ಅಭ್ಯಾಸದ ಕಡೆ ಗಮನಹರಿಸಿದರೆ ಮಾತ್ರ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ. ಮಕ್ಕಳು ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಸಾಗಿಸಬೇಕು ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ದೇಶ ಸೇವೆ ಮಾಡಲು ಮುಂದಾಗಬೇಕು ಎಂದರು. 

   ಪೂರ್ವಾಧ್ಯಕ್ಷ ಶ್ರೀನಿವಾಸ ಕಾಕಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದಾಗಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ಮುಂದಿನ ಜೀವನದ ಬಗ್ಗೆ ಗುರಿ ಕಾಣಬೇಕು. ನಮ್ಮ ತಂದೆಯವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

     ಜೆಸಿಐ ತರಬೇತುದಾರ ರಾಜಶೇಖರ್ ವಿದ್ಯಾರ್ಥಿ ಜೀವನ ಮತ್ತು ಜವಾಬ್ದಾರಿ ಹಾಗೂ ದಿನಕ್ಕೊಂದು ಚಿಂತನೆ ಮನು ಕುಲಕ್ಕೆ ಪ್ರೇರಣೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಇದೆ ಸಂದರ್ಭದಲ್ಲಿ ಜೆಸಿಐ ಘಟಕ ವತಿಯಿಂದ ತರಬೇತುದಾರರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. 

    ಜೆಸಿಐ ಅಧ್ಯಕ್ಷ ವೆಂಕಟೇಶ ಕಾಕಿ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ರವಿಕುಮಾರ ಪಾಟೀಲ, ದೇವಕುಮಾರ, ಪ್ರಕಾಶ ತಿಮಲಾಪುರ, ಶಿವಾನಂದ ಸಾಲಗೇರಿ, ಹನುಮಂತಪ್ಪ ಅಮಾಸಿ, ದೊಡ್ಡಹನುಮಂತಪ್ಪ ಕಾಕಿ, ನಾರಾಯಣ ಬಿಸಲಹಳ್ಳಿ, ಪ್ರವೀಣ ಸುರಹೊನ್ನಿ, ಚಂದ್ರು ದೇವಾಂಗದ, ಜಿ.ಡಿ. ಬಗಾಡೆ, ಪ್ರಭು ಎಳೆಹೊಳೆ, ಇಸ್ಮಾಯಿಲ್ ಐರಣಿ, ಲಕ್ಷ್ಮೀ ಕನಕಿ, ಸರೋಜಾ ಕುಬಸದ, ರೂಪಾ ಕಾಕಿ, ಲಕ್ಷ್ಮೀ ಕಾಕಿ, ಪ್ರಕಾಶ ಗಚ್ಚಿನಮಠ, ಪ್ರಭು ಹಲಗೇರಿ, ಪ್ರಕಾಶ ಬನ್ನಿಕೋಡ, ವಿನಯಕುಮಾರ ಗುಲಗಂಜಿ, ಆಶಿಪ್ ರಾಜಾ, ಪ್ರಕಾಶ ಹಿರೇಕೆರೂರು, ಬಸವರಾಜ ಕುಸನೂರ್ ಸೇರಿದಂತೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ