ಸಿಂಧಗಿ

ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಬಸ ಸಂಚಾರಕ್ಕೆ ಹೆಚ್ಚಿನ ಒತ್ತು: ಶಾಸಕ ಮನಗೂಳಿ

ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಬಸ ಸಂಚಾರಕ್ಕೆ ಹೆಚ್ಚಿನ ಒತ್ತು: ಶಾಸಕ ಮನಗೂಳಿ

ಸಿಂದಗಿ 16; ಕ್ಷೇತ್ರದ ಕೆಲವು ಗ್ರಾಮಗಳಿಗೆ ಬಸ್ಸುಗಳ ಸಂಚಾರವಿಲ್ಲದೆ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಗುತ್ತಿರುವುದನ್ನು ಗಮನಿಸಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಬಸ್ಸಿನ ಸೌಕರ್ಯ ಹಾಗೂ ಅವುಗಳ ಸಂಚಾರಕ್ಕೆ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಪಂ.ರಾ.ಇಂ ಉಪವಿಬಾಗ ಸನ್ 2023-24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 50.00 ಲಕ್ಷ ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಬೋರಗಿ ರಸ್ತೆ ವರೆಗೆ  ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಇದೆ ಸಂದರ್ಭದಲ್ಲಿ .ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪ್ರಥಮ ದರ್ಜೆ ಗುತ್ತಗೆದಾರ ಸತೀಶ ಬಿರಾದಾರ್, ಭೀಮನಗೌಡ ಬಿರಾದಾರ, ಚನ್ನು ಹೊಡ್ಲ ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಬಸವರಾಜ ಹರನಾಳ ಹಾಗೂ ಗ್ರಾಮ ಪಂಚಾಯತ್ ಸದ್ಯಸರಾದ ಶಂಕರಯ್ಯ ಹಿರೇಮಠ್, ಇರಫನ್ ಮುಲಾ, ಅನ್ನುಗೌಡರ ಪಾಟೀಲ, ಎಸ್‌.ಕೆ.ಪೂಜಾರಿ (ವಕೀಲರು) , ಶಂಕರ ಗೋಣಿ, ನಿಂಗು ಮೂಲಿಮನಿ, ಜಹಾಂಗೀರ ಮುಜಾವರ, ನಿಂಗು ಪ್ರಭುಗೋಳ, ಸಿದ್ದು ಜಾಲವಾದಿ. ಜಟ್ಟೆಪ್ಪ ಹರನಾಳ,  ನಮ್ಮ ಪಕ್ಷದ ಮುಖಂಡರು, ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ