ರಾಣೆಬೆನ್ನೂರ

ಹುಲ್ಲತ್ತಿ ಆಂಜನೇಯ ಸ್ವಾಮಿಯ ಮಹಾ ಕಾರ್ತಿಕೋತ್ಸವ

ಹುಲ್ಲತ್ತಿ ಆಂಜನೇಯ ಸ್ವಾಮಿಯ ಮಹಾ ಕಾರ್ತಿಕೋತ್ಸವ

ರಾಣೆಬೆನ್ನೂರು 09:  ತಾಲೂಕಿನ ಸುಕ್ಷೇತ್ರ ಹಳೆ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿಯ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವು ಡಿ. 12ರಂದು 2022 ರಂದು ಸಂಜೆ 8-30 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯು ತಿಳಿಸಿದೆ. ಅಂದು ಸೋಮುವಾರ ಮುಂಜಾನೆ ಎಂಟು ಗಂಟೆಗೆ ಸ್ವಾಮಿಗೆ  ಮಹಾ ರುದ್ರಾಭಿಷೇಕ, 9 ಗಂಟೆಗೆ  ಕುಂಕುಮ ಪೂಜಾ ನಡೆಯುವುದು. ರಾತ್ರಿ ಗುಡ್ಡದ ಅನ್ವೇರಿಯ, ವಿರಕ್ತ ಮಠದ ಶಿವಯೋಗಿಸ್ವರ ಮಹಾಸ್ವಾಮಿಗಳವರು ದೀಪ ಹಚ್ಚುವುದರ ಮೂಲಕ- ಕಾರ್ತಿಕೋತ್ಸವಕ್ಕೆ ಚಾಲನೆ ನೀಡುವರು.ಎಂದು ಹನುಮಂತ ದೇವರ ದೇವಸ್ಥಾನ ಸಮಿತಿ ಹಾಗೂ ಹುಲ್ಲತ್ತಿ ಗ್ರಾಮದ ಗ್ರಾಮಸ್ಥರು ತಿಳಿಸಿದ್ದಾರ. 

ಸುದ್ದಿ ಓದಿ