ಚಿಕ್ಕೋಡಿ

ಕನ್ನಡದ ಬಗ್ಗೆ ತಾತ್ಸಾರ: ಗ್ರಾಪಂ ಅಧ್ಯಕ್ಷರ ಅಮಾನತ್ತಿಗೆ ಆಗ್ರಹ

ಕನ್ನಡದ ಬಗ್ಗೆ ತಾತ್ಸಾರ: ಗ್ರಾಪಂ ಅಧ್ಯಕ್ಷರ ಅಮಾನತ್ತಿಗೆ ಆಗ್ರಹ

ಚಿಕ್ಕೋಡಿ 11:  ಚಿಕ್ಕೋಡಿ ತಾಲೂಕಿನ  ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕನ್ನಡ ವಿರೋಧಿ ಖಂಡಿಸಿ ನಿಪ್ಪಾಣಿ ತಾಲೂಕ ಕನ್ನಡಪರ ಸಂಘಟನೆಗಳು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಅವರನ್ನು  ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಕನ್ನಡದ ನೆಲ ಬೆಡಕಿಹಾಳದಲ್ಲಿ ಕಳೆದ ಎರಡು ದಿನಗಳ ಹಿಂದೆ ಸದಲಗಾ ಪಿಎಸ್ಐ ಅವರು ಕನ್ನಡದಲ್ಲಿ ಮಾತನಾಡಿ ಎಂದಾಗ ಗ್ರಾಪಂ ಅಧ್ಯಕ್ಷರು ವಿಶೇಷ ಸಭೆ ನಡೆಸಿ ಕನ್ನಡದ ಬಗ್ಗೆ ತಾತ್ಸಾರದ ಬಗ್ಗೆ ಮಾತನಾಡಿದ್ದರಿಂದ ಅಧ್ಯಕ್ಷರ ನಡೆಯನ್ನು ಕನ್ನಡಪರ ಸಂಘಟನೆಗಳು ಖಂಡಿಸಿದ್ದಾರೆ.

ಕನ್ನಡದ ಅಧಿಕಾರ ಉಂಡು ಕನ್ನಡ ಭಾಷೆ ನುಡಿಯಲು ತಾತ್ಸಾರ ತೋರಿರುವುದು ಕನ್ನಡಿಗರ ದುರಂತ.ಕನ್ನಡ ನೆಲದ ಅನ್ನ ಊಟ ಮಾಡುವ ಇವರಿಗೆ ಕನ್ನಡ ಭಾಷೆ ಬೇಡವೆ? ಕನ್ನಡಕ್ಕೆ ಅಪಮಾನವಾದರೆ ಗಡಿ ಕನ್ನಡಿಗರು ಸುಮ್ಮನಿರಲಾರೆವು. ಇಂತಹ ನಾಡದ್ರೋಹಿ ಕೆಲಸಕ್ಕೆ ಸ್ಥಳಾವಕಾಶ ಮಾಡಿ ಕೊಟ್ಟ ಕನ್ನಡದ ಅಧಿಕಾರಿಯಾಗಿರುವ ಪಿಡಿಒ ನಡೆಯನ್ನು ಖಂಡಿಸಿದ್ದಾರೆ.

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ  ನಿಪ್ಪಾಣಿ  ತಹಸಿಲ್ದಾರ್ ಕಾಯರ್ಾಲಯಕ್ಕೆ ತೆರಳಿ ತಹಸಿಲ್ದಾರರು ಮತ್ತು ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ. ಕನ್ನಡದ ದಕ್ಷ ಅಧಿಕಾರಿ ಸದಲಗಾ ಪಿಎಸ್ಐ ಕನ್ನಡ ಪ್ರೇಮ ಕೊಂಡಾಡಿ ಗಡಿ ಕನ್ನಡಿಗರಿಂದ ಬೆಂಬಲ ಸೂಚಿಸಲಾಯಿತು. 

ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ,  ಬೆಡಕಿಹಾಳ ಕನ್ನಡದ ನೆಲ.ಆ.ನೇ ಉಪಾಧ್ಯಾಯ,ಡಾ ಡಿ.ಎಸ್ ಚೌಗಲಾರಂತಹ ಸಾಹಿತಿಗಳಿಗೆ ಜನ್ಮನೀಡಿದ ಭೂಮಿ. ಭಾಷಾಬಾಂಧವ್ಯದಿಂದ ಬದುಕುವ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಆಗಬಾರದು ಈ ನೆಲದ ಪ್ರಥಮ ಪ್ರಜೆ ಅಧ್ಯಕ್ಷರು ಮತ್ತು ಕನ್ನಡ ಅಧಿಕಾರಿಗಳು ಈ ರೀತಿ ಕನ್ನಡ ವಿರೋಧಿ ನಿಲುವು ತಾಳಿರುವುದು ಅಕ್ಷಮ್ಯ ಅಪರಾಧ.ಕನ್ನಡಿಗರು ಇದನ್ನು ಸಹಿಸಲಾರೆವು. ಇವರ ವಿರುದ್ದ ಶಿಘ್ರ ಕ್ರಮ ಕೈಗೊಳ್ಳಬೇಕು ಮತ್ತು ಅನರ್ಹಗೊಳಿಸಬೇಕೆಂದು ಗುಡುಗಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿ, ಕರವೇ ಅಧ್ಯಕ್ಷ ಕಪಿಲ ಕುಳಿತೆ,ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಡಾ ಎಸ್ ಆರ್ ಪಾಟೀಲ, ಸಂಘಟನಾ ಸದಸ್ಯ ರವೀಂದ್ರ ಶೆಟ್ಟಿ,ಕಸಾಪ ಕೋಶಾಧ್ಯಕ್ಷ  ಶಿವಾನಂದ ಪುರಾಣಿಕಮಠ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ ಅಂಕಲಿ,ಗಡಿನಾಡು ಕನ್ನಡ ಬಳಗ ಅಧ್ಯಕ್ಷ ಮಾರುತಿ ಕೊಣ್ಣುರಿ,ಕನ್ನಡಪರ ಹೋರಾಟಗಾರರಾದ  ವಿರಣ್ಣಾ ಗಿರಮಲ್ಲನವರ, ಮಾಚಿದೇವ ಭೋಸಲೆ ಉಪಸ್ಥಿತರಿದ್ದರು.


ಸುದ್ದಿ ಓದಿ