ಪ್ರಾಧ್ಯಾಪಕ ಎಲ್ ಎಸ್ ವಂಟಮೂರೆ ಅವರಿಗೆ ಗ್ರಂಥ ಪ್ರದಾನ
ಮಾಂಜರಿ 14: ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ರವಿವಾರ ದಿ. 14 ರಂದು ಹಮ್ಮಿಕೊಂಡಿದ್ದ ಲಿಂಗೈಕ್ಯ ಪ್ರಾತಃಸ್ಮರಣೀಯ ಸಿದ್ದೇಶ್ವರ ಮಹಾಸ್ವಾಮಿಗಳ ಘನ ವ್ಯಕ್ತಿತ್ವದ ಕುರಿತು "ಶತಮಾನದ ಸಂತನಿಗೆ ಶತಕೋಟಿ ನಮನ" ಗ್ರಂಥಾವಲೋಕನ ಹಾಗೂ ಕವಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಕುರಿತು ತಮ್ಮ ಸ್ವರಚಿತ ಕಾವ್ಯ ಸಮರ್ಪಿಸಿದ ಶಿರಗುಪ್ಪಿಯ ಪ್ರತಿಷ್ಠಿತ ಕೆ ಎಲ್ ಇ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಸಂಯೋಜಕರು, ಚುಟುಕು ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರಿಗೆ ಸಾನಿದ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮಿಗಳು "ಶತಮಾನದ ಸಂತನಿಗೆ ಶತಕೋಟಿ ನಮನ" ಕೃತಿ ಪ್ರದಾನ ಮಾಡಿದರು. ಹಲವು ಗಣ್ಯ ಮಹೋದಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.