ಶಿಗ್ಗಾವ್

ಭಾರತ ಸೇವಾ ಸಂಸ್ಥೆಯಿಂದ ಬೃಹತ ತಿರಂಗಾ ಯಾತ್ರೆ : ಶ್ರೀಕಾಂತ ದುಂಡಿಗೌಡ್ರ

ಭಾರತ ಸೇವಾ ಸಂಸ್ಥೆಯಿಂದ ಬೃಹತ  ತಿರಂಗಾ ಯಾತ್ರೆ : ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ,14 : ಭಾರತ ಸೇವಾ ಸಂಸ್ಥೆಯ ವತಿಯಿಂದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ  ಬಂಕಾಪುರ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸುವ ನಿಟ್ಟಿನಲ್ಲಿ ಬೆಳಗ್ಗೆ 8 ಗಂಟೆಗೆ ಬಸ್ ನಿಲ್ದಾಣ ಹತ್ತಿರದ ಲಯನ್ಸ್‌ ಕ್ಲಬ್ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಿಗೇರಿ ಆವರಣದಿಂದ 350 ಪೂಟ್ ಉದ್ದದ ಭಾರತದ ಬೃಹತ್ ತಿರಂಗಾ ಯಾತ್ರೆ ಕಾರ್ಯಕ್ರಮ  ಹಮ್ಮಿಕೊಂಡಿದ್ದೇವೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ  ಹೇಳಿದರು. 

ಈ ತಿರಂಗಾ ಯಾತ್ರೆಗೆ ಬಂಕಾಪುರದ ಅರಳೆಲೆ ಮಠದ ಶ್ರೀ ು ಬ್ರ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದು  ಮತ್ತು  ಮಾಜಿ ಮುಖ್ಯಮಂತ್ರಿ ಹಾವೇರಿ  ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ  ಬಂಕಾಪುರದ ಮತ್ತು ಸುತ್ತ ಮುತ್ತಲಿನ ಎಲ್ಲ ಚುನಾಯಿತ ಪ್ರತಿನಿಧಿಗಳು,ಗಣ್ಯಮಾನ್ಯರು, ಹಿರಿಯರು ,ಸಮಸ್ತ ದೇಶಭಕ್ತ ಬಾಂಧವರು, ಯುವಕ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ  ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಯಶಸ್ವೀ ಗೊಳಿಸಲು ಕೋರಿದ್ದಾರೆ. 


ಸುದ್ದಿ ಓದಿ