ನ. 1ರಂದು ಬೃಹತ್ ಕನ್ನಡ ಧ್ವಜದ ಮೆರವಣಿಗೆ: ಶ್ಯಾಮ್ ಸುಂದರ್
ಹೊಸಪೇಟೆ 16: ನೂತನ ವಿಜಯನಗರ ಜಿಲ್ಲೆಯಲ್ಲಿ ನವೆಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ವಿಶೇಷ ಹಾಗೂ ವಿಶಿಷ್ಟ ಬಗೆಯಲ್ಲಿ ಆಚರಿಸುವ ಉದ್ದೇಶವಿದ್ದು ಇದಕ್ಕಾಗಿ ಬೃಹತ್ ಕನ್ನಡ ಧ್ವಜ ಸಿದ್ಧಗೊಳ್ಳುತ್ತಿದೆ ಎಂದು ಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ಯಾಮ್ ಸುಂದರ್ ತಿಳಿಸಿದರು.
ನಗರದ ಡಾ. ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಗೆ ಮಾಲಾರೆ್ಣ ನೆರವೇರಿಸಿ ಪುಷ್ಪನಮನ ಸಲ್ಲಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು. ನೂತನ ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಸುನಿಲ್ ಕುಮಾರ್ ನಾಯ್ಡು ಅವರ ನೇತೃತ್ವದಲ್ಲಿ ಬೃಹತ್ ಧ್ವಜದ ಮೆರವಣಿಗೆ ಸಿದ್ಧಗೊಳ್ಳುತ್ತಿದ್ದು ಈ ಬಾರಿಯ ರಾಜ್ಯೋತ್ಸವ ನೂತನ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಮುಖಂಡರಾದ ವೆಂಕಿ, ಈರಣ್ಣ, ಯೋಗಾನಂದ, ಹನುಮಂತ, ಯಾಕ್ಯೂಬ್, ಕಾರ್ತೀಕ್, ನಾಗರಾಜ್, ಅನಿಲ್, ಹನುಮಂತ, ಮಂಜು, ಸೂರಿ ಇತರರಿದ್ದರು.