ಭಾರಿ ವಿಜೃಂಭನೆಯಿಂದ ಗಣೇಶ ವಿಸರ್ಜನೆ: ಅದ್ದೂರಿ ಮೆರವಣಿಗೆ
ಚಿಕ್ಕೋಡಿ 19: ಕೊರೊನಾ ಆತಂಕದ ನಡುವೆಯು ಚಿಕ್ಕೋಡಿ ನಗರದಲ್ಲಿ ಗಣೇಶೋತ್ಸವ ಯಶಸ್ವಿಯಾಗಿದೆ. ರವಿವಾರ ಅಂತಿಮವಾಗಿ ಗಣೇಶ ವಿಸರ್ಜನೆ ಭಾರಿ ವಿಜೃಂಭನೆಯಿಂದ ನಡೆಯಿತು. ಮತ್ತೆ ಬಾ ಗಣಪ ಎಂದು ಚಿಕ್ಕೋಡಿ ನಾಗರಿಕರು ಗಣೇಶನ್ನು ವಿಸರ್ಜಿಸಿದರು.
ಚಿಕ್ಕೋಡಿ ನಗರದ 30 ಕ್ಕೂ ಹೆಚ್ಚಿನ ಗಣೇಶ ಮಂಡಳಗಳ ಗಣೇಶ ವಿಸರ್ಜನೆ ಏಕಕಾಲಕ್ಕೆ ನಡೆದಿರುವುದು ವಿಶೇವಾಗಿತ್ತು. ನಗರದ ಎಲ್ಲ ಗಣೇಶ ಮಂಡಳವು ತಮ್ಮ ಗಣೇಶ ಮೂರ್ತಿಯನ್ನು ಬಸ್ ನಿಲ್ದಾಣದ ಹತ್ತಿರ ತಂದು ನಿಲ್ಲಿಸಿದ್ದರು. ಸಂಜೆ ನಾಲ್ಕು ಗಂಟೆಗೆ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಪೊಲೀಸ್ ಇಲಾಖೆ, ಪುರಸಭೆ ಸರ್ವ ಸದಸ್ಯರು ಮತ್ತು ನಗರದ ಹಿರಿಯ ನಾಗರಿಕರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸಾಕ್ಷಿಯಾದರು. ಬಸ್ ನಿಲ್ದಾಣದಿಂದ ಪುರಸಭೆ ಕಚೇರಿಯವರಿಗೆ ಆಗಮೀಸಿದ ಗಣೇಶ ಮೂರ್ತಿಗಳನ್ನು ಪುರಸಭೆ ಮುಂಭಾಗದಲ್ಲಿ ಕಂದಾಯ ಇಲಾಖೆ, ಪುರಸಭೆ ಮತ್ತು ಪೊಲೀಸ್ ಇಲಾಖೆ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಅಂತಿಮವಾಗಿ ಬಿಳ್ಕೋಟ್ಟರು.
ಪ್ರತಿ ವರ್ಷ ಗಣೇಶ ವಿಸರ್ಜನೆ ವೇಳೆಯಲ್ಲಿ ಆಯಾ ಗಣೇಶ ಮಂಡಳವು ಡಿಜೆ ಅಥವಾ ವಿವಿಧ ವಾಧ್ಯ ಮೇಳದೊಂದಿಗೆ ವಿಸರ್ಜನೆ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಈ ಭಾರಿ ಎಲ್ಲ ಗಣೇಶ ಮಂಡಳಗಳ ಒಪ್ಪಿಗೆ ಮೇರಿಗೆ ಒಂದೇ ಡಿಜೆ ಸೌಂಡ ಹಚ್ಚಿ ವಿಸರ್ಜನೆ ಶಾಂತಿಯುತವಾಗಿರುವುದು ವಿಶೇಷವಾಗಿತ್ತು.
ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದ ಮಹಿಳೆಯರು: ಮಧ್ಯಾಹ್ನ 12 ಗಂಟೆಗೆ ಬಸ್ ನಿಲ್ದಾಣದ ಹತ್ತಿರ ಆಗಮೀಸಿದ ಮಹಿಳೆಯರು ತಲೆ ಮೇಲೆ ಪೇಟಾ ಧರಿಸಿ ಡಿಜೆ ಸೌಂಡಕ್ಕೆ ಕುಣಿದು ಕುಪ್ಪಳಿಸಿ ಗಣೇಶಗೆ ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ರಾಜ್ಯ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ. ಸದಸ್ಯರಾದ ನಾಗರಾಜ ಮೇಧಾರ, ವಿಶ್ವನಾಥ ಕಾಮಗೌಡ, ಮುಖಂಡರಾದ ಶಿವು ಮಿರ್ಜೆ, ಬಾಬು ಮಿರ್ಜೆ, ಅಂದಾನಿ ವಂಟಮುತ್ತೆ, ಸತೀಶ ನೂಲಿ, ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಯುಕೇಶಕುಮಾರ, ಡಿವೈಎಸ್ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಮುಖ್ಯಾಧಿಕಾರಿ ಸುಂದರ ರೋಗಿ ಸೇರಿದಂತೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.