ಗ್ರಾಮೀಣ ಸೊಗಡಿನ ತವರೂರೇ ಗ್ರಾಮದೇವತೆ ಜಾತ್ರೆ : ಯಲಿಗಾರ
ಶಿಗ್ಗಾವಿ : ಪಟ್ಟಣದ ಪಾದಗಟ್ಟೆಯಲ್ಲಿ ನಡೆದ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಅಮೋಘ ಸಿದ್ದೇಶ್ವರ ಸ್ವಾಮೀಜಿ ಹಾಗೂ ಸ್ಥಳೀಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಐದನೇ ದಿನದ ಧಾರ್ಮಿಕ ಸಮಾರಂಭ ನಡೆಯಿತು ಉಭಯ ಶ್ರೀಗಳು ತಮ್ಮ ಅಮೃತವಾಣಿ ಮುಖಾಂತರ ಆರ್ಶಿವದಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕಿ ನಿರ್ಮಲಾ ಯಲಿಗಾರ ಅವರು, ಗ್ರಾಮೀಣ ಸೊಗಡಿನ ಕಲೆ, ಸಾಹಿತ್ಯ, ಪರಂಪರೆ ಹಾಗೂ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಕುರಿತಾದ ವಿಶೇಷ ಉಪನ್ಯಾಸ ನೀಡಿದರು.
ಯುವ ಮುಖಂಡ ರಾಜು ಕುನ್ನೂರ ಮಾತನಾಡಿ ಗ್ರಾಮದೇವತೆ ಕಲ್ಪನೆ ಇಂದು ನಿನ್ನೆಯದಲ್ಲ ಪ್ರಾಚೀನ ಕಾಲದಿಂದ ಹಿಡಿದು ಅರ್ವಾಚೀನ ಕಾಲದವರೆಗೆ ಗ್ರಾಮದೇವತೆ ಜನಪದ ಜೀವನದಲ್ಲಿ ಅವಿಭಾಜ್ಯವಾಗಿ ಸೇರಿಕೊಂಡಿದೆ ಅಲ್ಲದೇ ಗ್ರಾಮದಲ್ಲಿ ಯಾವುದೇ ಶುಭಕಾರ್ಯ ಮತ್ತು ಅಪಾಯದಲ್ಲಿದ್ದಾಗ ಆಗ್ರಾಮದ ಗ್ರಾಮದೇವೆತೆಯೇ ಹೊಣೆಗಾರಿಕೆಯಾಗಿರುತ್ತಿದ್ದಳು ಮತ್ತು ಜನರ ಬಾಳಿಗೆ ಪೌರುಷ ಸಾಹಸ, ಕಷ್ಟ, ಸಂಹಿಷ್ಣುತೆ, ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ ಶಕ್ತಿಗಳನ್ನು ನೀಡಿ ಜನತೆಯನ್ನು ರಕ್ಷಿಸಿಕೊಂಡು ಬರುತ್ತಿರುವ ದೊಡ್ಡ ಶಕ್ತಿಯಾಗಿದ್ದಾಳೆ ಎಂದರು. ಪ್ರತಿನಿತ್ಯ ಗ್ರಾಮದೇವತೆ ಜಾತ್ರಾ ಮಹೋತ್ಸವ ಸಮಿತಿ ವತಯಿಂದ ಅನ್ನದಾಸೋಹ ನಡೆಯುತ್ತಿರುವುದು ಈ ಜಾತ್ರಾ ಮಹೋತ್ಸವದ ವಿಶೇಷ.
ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ.
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇವಿಯ ಆರಾಧನೆಯ ಮಹತ್ವ ಮತ್ತು ಶಕ್ತಿಯನ್ನು ಸಾರುವ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಪ್ರಮುಖ ಆಕರ್ಷಣೆಯಾದರು. ಶ್ರೀಗಳನ್ನು ಜಾತ್ರಾ ಮಹೋತ್ಸವ ಸಮಿತಿಯಿಂದ ಭಕ್ತಿ ಪೂರ್ವಕವಾಗಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಾಜಿ ಸಂಸದ ಹಾಗೂ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ, ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಫಕ್ಕೀರಜ್ಜ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಪ್ರಾಚಾರ್ಯ ಬ.ಫ.ಯಲಿಗಾರ, ಡಾ ಶ್ರೀನಿವಾಸ ದೇಶಪಾಂಡೆ, ಕೆ.ಎಸ್.ಆರ್.ಪಿ ಕಮಾಂಡೆಂಟ್ ಟಿ.ಸುಂದರಾಜ್, ಪುರಸಭೆ ಸದಸ್ಯರಾದ ರಮೇಶ ವನಹಳ್ಳಿ, ಶಿವಾನಂದ ಬಾಗೂರ, ಕೊಟ್ರ್ಪ ನಡೂರ, ಫಕ್ಕೀರ್ಪ ಕುಂದೂರ, ನವೀನ ಸಾಸನೂರ, ಗಂಗಣ್ಣ ಸಾತಣ್ಣವರ, ರವಿ ಕಡೆಮನಿ, ಶಿವಪುತ್ರ್ಪ ಜಕ್ಕಣ್ಣವರ, ಚೇತನ ಕಲಾಲ, ಸಂಗಪ್ಪ ಕಂಕನವಾಡ, ಪತ್ರಕರ್ತರಾದ ಈಶ್ವರಗೌಡ ಕರಿಗೌಡ್ರ, ವಿರೂಪಾಕ್ಷಪ್ಪ ನೀರಲಗಿ, ಸಿದ್ಧರಾಮಗೌಡ ಮೆಳ್ಳಾಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.